ಕಾಸರಗೋಡು, ಜ.11 (DaijiworldNews/HR): ಕಾನತ್ತೂರಿನಲ್ಲಿ ಪತ್ನಿಯನ್ನು ಕೊಲೆಗೈದು ಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಕಲಿ ಕೋವಿಯ ವಾರೀಸುದಾರನಿಗಾಗಿ ಪೊಲೀಸರು ತನಿಖೆ ಆರಂಭಿಸಿದ್ದು, ಫಾರೆನ್ಸಿಕ್ ತಜ್ಞರು ಇಂದು ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸಿದ್ದಾರೆ.

ಈ ನಡುವೆ ಕೊಲೆಗೀಡಾದ ಬೇಬಿಯ ಜೊತೆ ಸಂಪರ್ಕ ಹೊಂದಿದ್ದನೆನ್ನಲಾದ ಜೆಸಿಬಿ ಚಾಲಕನಿಂದ ಮಾಹಿತಿ ಕಲೆ ಹಾಕಲು ತನಿಖಾ ತಂಡ ತೀರ್ಮಾನಿಸಿದ್ದು, ಮೊಬೈಲ್ ಕರೆಗಳನ್ನು ಪರಿಶೀಲಿಸಲು ನಿರ್ಧರಿಸಿದೆ.
ಕೃತ್ಯ ನಡೆಯುವ ಹಿಂದಿನ ದಿನ ಪತಿ ವಿಜಯನ್ ಪೊಲೀಸರಿಗೆ ದೂರು ನೀಡಿದ್ದು, ಪತ್ನಿಗೆ ಯುವಕನೋರ್ವ ಕರೆ ಮಾಡಿ ಕಿರುಕುಳ ನೀಡುತ್ತಿದ್ದುದಾಗಿ ತಿಳಿಸಿದ್ದು, ಇದರಿಂದ ಜೆಸಿಬಿ ಚಾಲಕನಿಂದ ಹೇಳಿಕೆ ಪಡೆಯಲು ಪೊಲೀಸರು ತೀರ್ಮಾನಿಸಿದ್ದಾರೆ.