ಮಂಗಳೂರು, ಜ. 12 (DaijiworldNews/MB) : ಕರಾವಳಿ ಭದ್ರತಾ ಪಡೆ ಸಿಬ್ಬಂದಿಗಳು ಮಂಗಳವಾರ ಜನವರಿ 12 ರಂದು ಸೋಮೇಶ್ವರ ಕಡಲಲ್ಲಿ ಮುಳುಗಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ.


ಯುವತಿಯನ್ನು ಬೆಂಗಳೂರಿನ ಬೊಮ್ಮಸಂದ್ರ ನಿವಾಸಿ ಕೀರ್ತಿ (23) ಎಂದು ಗುರುತಿಸಲಾಗಿದೆ.
ತನ್ನ ಸ್ನೇಹಿತರಾದ ಜಯಶ್ರೀ ಮತ್ತು ಕ್ರಿಯಾ ಎಂಬವರೊಂದಿಗೆ ಆಕೆ ಪ್ರವಾಸಕ್ಕೆಂದು ಬೆಂಗಳೂರಿನಿಂದ ಕ್ಯಾಬ್ ಮೂಲಕ ಮಂಗಳೂರಿಗೆ ಬಂದಿದ್ದಳು ಎಂದು ಹೇಳಲಾಗಿದೆ.
ಕೀರ್ತಿ ಅಳೆ ಅಪ್ಪಳಿಸುವಲ್ಲಿ ನೀರಿನಲ್ಲಿ ಆಟವಾಡುತ್ತಿದ್ದಳು ಎನ್ನಲಾಗಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಕರಾವಳಿ ಭದ್ರತಾ ಪಡೆ ಸಿಬ್ಬಂದಿ ಅಶೋಕ್ ಸೋಮೇಶ್ವರ, ಕಿರಣ್, ಆಂಟಾನಿ ಮತ್ತು ಶಿವಪ್ರಸಾದ್ ಭಾಗವಹಿಸಿದ್ದರು.