ಕಾಸರಗೋಡು, ಜ. 12 (DaijiworldNews/MB) : ಫ್ಯಾಶನ್ ಗೋಲ್ಡ್ ಜುವೆಲ್ಲರಿ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೈಲಿನಲ್ಲಿರುವ ಮಂಜೇಶ್ವರ ಶಾಸಕ ಎಂ. ಸಿ ಕಮರುದ್ದೀನ್ಗೆ ಹೊಸದುರ್ಗ ಮೆಜಿಸ್ಟ್ರೇಟ್ ನ್ಯಾಯಾಲಯ 24 ಪ್ರಕರಣಗಳಿಗೆ ಸಂಬಂಧಪಟ್ಟಂತೆ ಜಾಮೀನು ನೀಡಿದೆ.

ಮೂರು ಪ್ರಕರಣಗಳಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ 80 ಕ್ಕೂ ಅಧಿಕ ಮೊಕದ್ದಮೆಗಳಿರುವುದರಿಂದ ಈ ಎಲ್ಲಾ ಪ್ರಕರಣಗಳಲ್ಲಿ ಜಾಮೀನು ದೊರೆತಲ್ಲಿ ಮಾತ್ರ ಕಮರುದ್ದೀನ್ ಜೈಲಿನಿಂದ ಬಿಡುಗಡೆಗೊಳ್ಳಬಹುದಾಗಿದೆ.