ಮಂಗಳೂರು,ಜ.12 (DaijiworldNews/HR): ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಮತ್ತು ರಾಷ್ಟ್ರೀಯ ಯುವ ದಿನಾಚರಣೆಯ ಪ್ರಯುಕ್ತ ನಿರುದ್ಯೋಗ ಸಮಸ್ಯೆಯನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಎನ್ಎಸ್ಯುಐ ಕಾರ್ಯಕರ್ತರು 'ಬೂಟ್ ಪಾಲಿಷ್ ಅಭಿಯಾನ' ನಡೆಸಿದರು.



ಕಾಂಗ್ರೆಸ್ ಕಚೇರಿ ಮುಂಭಾಗ ವಿದ್ಯಾರ್ಥಿಗಳು ಬೂಟ್ ಪಾಲಿಷ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಇನ್ನು ಪ್ರತಿಭಟನೆಯಲ್ಲಿ ಎನ್ಎಸ್ಯುಐ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ, ಅಪ್ಸಾನ್, ಅಂಕುಶ್ ರೈ, ಶಫಿಕ್, ಹಬೀಬ್ ಮ್ಯಾಕ್, ವಿನಯ್ ರಾಜ್ ಉಪಸ್ಥಿತರಿದ್ದರು.