ಕಾಸರಗೋಡು, ಜ.12 (DaijiworldNews/HR): ಪೆರ್ಲ - ಚೆರ್ಕಳ ನಡುವಿನ ರಾಜ್ಯ ಹೆದ್ದಾರಿಯ ಅವ್ಯವಸ್ಥೆ ವಿರುದ್ಧ ನಾಗರಿಕರು ಹೋರಾಟಕ್ಕೆ ಇಳಿಯುವಂತಾಗಿದ್ದು, ಶೀಘ್ರ ಈ ರಸ್ತೆಯ ದುರಸ್ತಿ ಕಾಮಗಾರಿ ಆರಂಭಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಹೋರಾಟ ಸಮಿತಿ ಮುನ್ನೆಚ್ಚರಿಕೆ ನೀಡಿದೆ.


ಉಕ್ಕಿನಡ್ಕದಿಂದ ಚರ್ಲಡ್ಕ ತನಕ ಡಾಮರೀಕರಣ ನಡೆಸಲಾಗಿದೆ. ಆದರೆ ಅರ್ಧದಲ್ಲೇ ಕಾಮಗಾರಿ ಸ್ಥಗಿತಗೊಳಿಸಿದ್ದು, ಇದರಿಂದ ಪ್ರಯಾಣವೇ ದುಸ್ತರವಾಗಿದೆ.
ಇದನ್ನು ಪ್ರತಿಭಟಿಸಿ ಹೋರಾಟ ಸಮಿತಿ ರಚಿಸಿ ಹೋರಾಟಕ್ಕೆ ದುಮುಕಿದೆ. ಮೊದಲ ಹಂತವಾಗಿ ರಸ್ತೆಯಲ್ಲೇ ಮಲಗಿ ವಿನೂತನ ಪ್ರತಿಭಟನೆ ನಡೆಸಿದ್ದು, ಹೋರಾಟ ಸಮಿತಿ ಅಧ್ಯಕ್ಷ ಮಾಹಿನ್ ಕೇಳೋಟ್, ಸಂಚಾಲಕ ಇಬ್ರಾಹಿಂ ನೆಲ್ಲಿಕಟ್ಟೆ, ಎಂ.ಪುರುಷೋತ್ತಮ ನಾಯರ್ ನೇತೃತ್ವ ನೀಡಿದರು.