ಕಾಸರಗೋಡು,ಜ.12 (DaijiworldNews/HR): ಜಿಲ್ಲೆಯಲ್ಲಿ ಮಂಗಳವಾರ 72 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅದರಲ್ಲಿ 56 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ.

ವಿದೇಶದಿಂದ ಹಾಗೂ ಹೊರರಾಜ್ಯದಿಂದ ಬಂದ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.
ಇದುವರೆಗೆ ಜಿಲ್ಲೆಯಲ್ಲಿ 24,920 ಮಂದಿಗೆ ಸೋಂಕು ತಗಲಿದ್ದು, ಈ ಪೈಕಿ ವಿದೇಶಗಳಿಂದ ಬಂದ 1150 , ಹೊರರಾಜ್ಯಗಳಿಂದ ಬಂದ 913 ಮಂದಿ ಇದರಲ್ಲಿ ಒಳಗೊಂಡಿದ್ದಾರೆ.
ಇನ್ನು ಒಟ್ಟು 22,905 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದ್ದು, 5511 ಮಂದಿ ನಿಗಾದಲ್ಲಿದ್ದಾರೆ.