ಮಂಗಳೂರು, ಜ. 13 (DaijiworldNews/MB) : ವೇಶ್ಯಾವಾಟಿಕೆ ಆರೋಪದ ಹಿನ್ನೆಲೆಯಲ್ಲಿ ಮಂಗಳೂರು ಉತ್ತರ ಪೊಲೀಸರು ಜನವರಿ 12 ರಂದು ಕೆ ಎಸ್ ರಾವ್ ರಸ್ತೆಯಲ್ಲಿರುವ ಹಿಂದೂಸ್ತಾನ್ ಲಾಡ್ಜ್ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯ ಸಂದರ್ಭ ಜಿಲ್ಲೆಯ ಹೊರಗಿನ ಒತ್ತಾಯಪೂರ್ವಕ ವೇಶ್ಯಾವಾಟಿಕೆಗೆ ತಳ್ಳಲಾಗಿದ್ದ ನಾಲ್ವರು ಮಹಿಳೆಯರನ್ನು ರಕ್ಷಿಸಲಾಗಿದೆ.

ಏತನ್ಮಧ್ಯೆ, ಮಹಿಳೆಯರನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಿದ್ದ ಸುನೀಲ್ ಎಂದು ಗುರುತಿಸಲ್ಪಟ್ಟ ಆರೋಪಿಯು ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
ಇತರ ಆರೋಪಿಗಳಾದ ಲಾಡ್ಜ್ ಮಾಲೀಕ ಮೋಹನ್, ಮ್ಯಾನೇಜರ್ ಅಬ್ದುಲ್ ಬಶೀರ್, ರೂಮ್ ಬಾಯ್ ಉದಯ್ ಶೆಟ್ಟಿ ಮತ್ತು ಗ್ರಾಹಕರಾದ ಭರತ್ ಮತ್ತು ಬಾಲಕೃಷ್ಣ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತ ಶಶಿ ಕುಮಾರ್, ಪೊಲೀಸ್ ಉಪ ಆಯುಕ್ತರಾದ ವಿನಯ್ ಗಾಂವ್ಕರ್, ಹರಿರಾಮ್ ಶಂಕರ್, ಎಸಿಪಿ ಕೇಂದ್ರ ಉಪವಿಭಾಗ ಜಗದೀಶ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಬಿ, ರೇವತಿ, ಪಿಎಸ್ಐ ನಾಗರಾಜ್, ಜಗದೀಶ್ ಮತ್ತು ಸಿಬ್ಬಂದಿ ಸುಜನ್ ಶೆಟ್ಟಿ, ಮಹೇಶ್, ತಿಪ್ಪೆರೆಡ್ಡಪ್ಪ, ಮಹಾದೇವ್, ಸಾಗರ್ ರತ್ನಾಕರ್, ಅರುಣಾ, ಪುಷ್ಪಾ ರಾಣಿ ಮತ್ತು ಗುರುನಾಥ್ ಆರೋಪಿಗಳನ್ನು ಬಂಧಿಸಿದರು.