ಮಂಗಳೂರು, ಜ. 13 (DaijiworldNews/MB) : ಜನವರಿ 12 ರ ಮಂಗಳವಾರ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದಾರೆಂದು ಆರೋಪಿಸಲಾದ ವಾಹನವನ್ನು ಹಿಂದೂ ಕಾರ್ಯಕರ್ತರು ತಡೆದರು.








ವಾಹನದಲ್ಲಿ ಅಕ್ರಮವಾಗಿ ದನಗಳನ್ನು ಸಾಗಿಸಲಾಗುತ್ತಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.
ಮೂಲಗಳ ಪ್ರಕಾರ, ವಾಹನದಲ್ಲಿ ಆರು ಹಸುಗಳು ಮತ್ತು ಒಂದು ಕರು ಇದ್ದು ಇದನ್ನು ಕೋಟೆಕಾರ್ ಡೈರಿಯಿಂದ ಬಾಕ್ರಬೈಲ್ ಡೈರಿಗೆ ಸಾಗಿಸಲಾಗುತ್ತಿತ್ತು.
ವಾಹನವನ್ನು ಕೊಣಾಜೆ ಪೊಲೀಸರು ವಶಪಡಿಸಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.