ಬೆಂಗಳೂರು, ಜೂ30: ಭಾರತದಿಂದ ತಲೆ ಮರೆಸಿಕೊಂಡಿದ್ದ ಕುಖ್ಯಾತ ಶಾರ್ಪ್ ಶೂಟರ್ ರಶೀದ್ ಮಲಬಾರಿ ಅಬುದಾಬಿಯಲ್ಲಿ ಬಂಧನವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಬಾಂಗ್ಲಾದೇಶದ ಪಾಸ್ ಪೋರ್ಟ್ ಹೊಂದಿರುವ ರಶೀದ್ ಮಲಬಾರಿ ಅಬುದಾಬಿಯಲ್ಲಿ ಮೇ ತಿಂಗಳ ಕೊನೆಯ ವಾರದಲ್ಲಿ ಅಬುದಾಬಿಯ ಪೊಲೀಸರಿಂದ ಬಂಧನಕ್ಕೆ ಒಳಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿದೆ.
ರಾಜ್ಯ ಹೈಕೋರ್ಟ್ ಆದೇಶದಂತೆ ಬೆಂಗಳೂರು ಕಾರಾಗೃಹದಿಂದ 2014 ಜುಲೈ 21 ರಂದು ಹೊರ ಬಂದ ರಶೀದ್ ಮಲಬಾರಿ ಬೆಂಗಳೂರು ಪೊಲೀಸರ ಬೇಜಾವಬ್ದಾರಿಯಿಂದ ನಾಪತ್ತೆಯಾಗಿದ್ದ. ಮುಂಬೈಯಿಂದ ಸಮುದ್ರ ಮಾರ್ಗದ ಮೂಲಕ ಕೊಲ್ಲಿ ರಾಷ್ಟ್ರಕ್ಕೆ ಪರಾರಿಯಾಗಿದ್ದ ಬಗ್ಗೆ ಮಾಹಿತಿ ಇತ್ತು. ಆದರೆ ಈ ಬಗ್ಗೆ ರಾಜ್ಯ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು.
ಇದೀಗ ಭೂಗತ ಪಾತಕಿ ರಶೀದ್ ಮಲಬಾರಿ ಅಬುದಾಬಿಯಲ್ಲಿ ಬಂಧನವಾಗಿರುವ ಬಗ್ಗೆ ಮಾಹಿತಿ ಲಭಿಸಿದೆ.