ಉಪ್ಪಿನಂಗಡಿ ಸೆ25: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಬ್ಯಾಂಕ್ ರಸ್ತೆಯಲ್ಲಿರುವ ಹಲವು ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದಿರುವುದು ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಸರ್ಕಾರಿ ಕಾಲೇಜಿಗೆ ನುಗ್ಗಿ ಕಪಾಟುಗಳನ್ನು ಜಾಲಾಡಿರುವ ಕಳ್ಳರು, ಅಲ್ಲೇನು ದೊರೆಯದಿದ್ದಾಗ ಸಿಸಿಟಿವಿ ಕ್ಯಾಮರಾದ ಡಿವಿಆರ್ ನ್ನೇ ಕಳವುಗೈದಿದ್ದಾರೆ..ಬಳಿಕ ಬ್ಯಾಂಕ್ ರಸ್ತೆಯಲ್ಲಿನ ಕೊಗ್ಗಣ್ಣ ಕಿಣಿ ಮರ್ಚೆಂಟ್ ಅಂಗಡಿ, ಅಚ್ಯುತ್ ಪಡಿಯಾರ್ ಎಂಬವರ ಝೆರಾಕ್ಸ್ ಅಂಗಡಿ, ಸಫಾ ಫರ್ನೀಚರ್ ಮಳಿಗೆ, ಎಂ.ಎಂ.ಎಸ್ ಟ್ರೇಡರ್ಸ್ ಗಳಿಗೂ ಕಳ್ಳರು ನುಗ್ಗಿದ್ದಾರೆ.ಈ ಎಲ್ಲಾ ಅಂಗಡಿಗಳಿಂದ ಒಟ್ಟು ಸುಮಾರು 14 ಸಾವಿರ ರೂ.ನಗದನ್ನು ಕಳವುಗೈಯ್ಯಲಾಗಿದೆ. ಇದೇ ಸಂದರ್ಭ ಶ್ರೀಧರ್ ಜ್ಯುವೆಲ್ಲರಿಗೆ ನುಗ್ಗಲು ಕಳ್ಳರು ವಿಫಲ ಯತ್ನ ನಡೆಸಿದ್ದಾರೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಆಗಮಿಸಿದ್ದು, ತನಿಖೆ ಆರಂಭಿಸಿದ್ದಾರೆ.