ಉಡುಪಿ, ಜ. 14 (DaijiworldNews/MB) : ಮಕರ ಸಂಕ್ರಾಂತಿಯ ಈ ಶುಭದಿನದಂದು ಜಿಲ್ಲೆಗೆ ಕೊರೊನಾ ಲಸಿಕೆ ಕೋವಿಶೀಲ್ಡ್ ತಲುಪಿದೆ.









ಮಂಗಳೂರು ಸರ್ಕಾರಿ ಔಷಧ ಉಗ್ರಾಣ ಕೇಂದ್ರದಿಂದ ಪೊಲೀಸ್ ಭದ್ರತೆಯೊಂದಿಗೆ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಗೆ ಬುಧವಾರ ಬೆಳಿಗ್ಗೆ ಸುಮಾರು 11:50 ಕ್ಕೆ ಲಸಿಕೆ ತಲುಪಿದೆ. ಬಳಿಕ ಸುರಕ್ಷಿತವಾಗಿ ಔಷಧ ದಾಸ್ತಾನು ಉಗ್ರಾಣದಲ್ಲಿ ಲಸಿಕೆಯನ್ನು ಇರಿಸಲಾಗಿದೆ. ಮೊದಲ ಹಂತದಲ್ಲಿ ಜಿಲ್ಲೆಗೆ 12 ಸಾವಿರ ಲಸಿಕೆಗಳು ತಲುಪಿದೆ.
ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುಧೀರ ಚಂದ್ರ ಸೂಡ, ಕೋವಿಡ್ ನೋಡಲ್ ಅಧಿಕಾರಿ ಡಾ.ಪ್ರಶಾಂತ್, ಡಾ.ಪ್ರೇಮಾನಂದ,ಜಿ.ಪಂ ಸಿಇಒ ಡಾ. ನವೀನ್ ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.