ಪುತ್ತೂರು, ಜೂ30: ಕರಾವಳಿಯಲ್ಲಿ ನಿರಂತರ ಸುರಿಯುತ್ತಿರುವ ಮಹಾ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಈ ನಡುವೆ ಧೂಳಿನ ಮಳೆಯಾಗಿದೆ.
ಪುತ್ತೂರು ತಾಲೂಕಿನ ಬೆಟ್ಟಂಪಾಡಿಯಲ್ಲಿ ಜೂ.29ರಂದು ರಾತ್ರಿ 8ರಿಂದ 10ಗಂಟೆವರೆಗೆ ಧೂಳಿನ ಮಳೆ ಬಿದ್ದಿದೆ. ಕೇವಲ ಧೂಳು ಮಾತ್ರ ಆಕಾಶದಿಂದ ಬೀಳುತ್ತಿರುವುದನ್ನು ನೋಡಿದ ಜನರು ಭಯಭೀತರಾಗಿದ್ದಾರೆ. ಈ ಮಳೆಯಿಂದಾಗಿ ಸುತ್ತಮುತ್ತಲಿನ ಪರಿಸರದಲ್ಲಿ ಬೂದಿಯ ವಾಸನೆ ಹರಡಿದೆ ಎನ್ನಲಾಗಿದೆ.
ಆಲಿಕ್ಲಲು ಮಳೆ, ಕೆಂಪು ಮಳೆಯಾಗುವುದು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ. ಆದರೆ, ಈ ರೀತಿ ಧೂಳಿನ ಮಳೆಯಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.