ಕಾಪು, ಜ.14 (DaijiworldNews/PY): ಜಮೀಯತುಲ್ ಫಲಾಹ್ ದ.ಕ ಹಾಗೂ ಉಡುಪಿ ಜಿಲ್ಲೆಯ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಶಬೀಬ್ ಅಹ್ಮದ್ ಕಾಝಿ ಅವರು ಆಯ್ಕೆಯಾಗಿದ್ದಾರೆ.

ಶಬೀಬ್ ಅಹ್ಮದ್ ಕಾಝಿ ಅವರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಭಿವೃದ್ದಿಗಾಗಿ ಸೇವೆಗೈಯುತ್ತಿರುವ ಮುಂಚೂಣಿ ಸಂಸ್ಥೆ ಜಮೀಯತುಲ್ ಫಲಾಹ್ ಸ್ಥಾಪನೆಗಾಗಿ ದುಡಿದವರಲ್ಲಿ ಒಬ್ಬರಾಗಿದ್ದಾರೆ.
ಜಮಿಯ್ಯತುಲ್ ದ.ಕ ಹಾಗೂ ಉಡುಪಿ ಜಿಲ್ಲೆಯ ಕೇಂದ್ರ ಸಮಿತಿಗೆ ಶಬೀಬ್ ಅಹ್ಮದ್ ಕಾಝಿ ಅವರಿಗೆ ಸುಹೆಮ್ ಕಾಜಿ ಎವರ್ ಗ್ರೀನ್ ಗಾರ್ಮೆಂಟ್ಸ್, ರಫ್ತು ಹಾಗೂ ಕಾಪುವಿನ ಕಾಝಿ ಕುಟುಂಬದ ಎಲ್ಲಾ ಸಹೋದರ ಹಾಗೂ ಸಹೋದರಿಯರು ಹಾರೈಸಿದ್ದಾರೆ.