ಕಾರ್ಕಳ, ಜ.14 (DaijiworldNews/PY): ತಾಯಿ ಹಾಗೂಇಬ್ಬರು ಮಕ್ಕಳು ನಾಪತ್ತೆಯಾಗಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ.

ಜನವರಿ 13ರ ಸಂಜೆ 4.30ಕ್ಕೆ ಈ ಘಟನೆ ನಡೆದಿದ್ದು, ಜೋಡುಕಟ್ಟೆ ಸುರೇಖಾ ನಗರದ ನಿವಾಸಿ ಗಣೇಶ್ ಎಂಬವರ ಪತ್ನಿ ಜ್ಯೋತಿ (25) ಅವರ ಮಕ್ಕಳಾದ ಚರಣ್ (7), ತೃಪ್ತಿ (5) ಎಂಬವರು ಮನೆಯಲ್ಲಿ ಯಾರಿಗೂ ತಿಳಿಸದೇ ಹೊರಟು ಹೋದವರು ವಾಪಾಸ್ಸಾಗಿಲ್ಲ.
ಈ ಕುರಿತು ಗಣೇಶ ಎಂಬವರು ನಗರ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.