ಮಂಗಳೂರು, ಜ 14 (DaijiworldNews/SM): ನಗರದ ಪ್ರಸಿದ್ಧ ಪುಣ್ಯಕ್ಷೇತ್ರವಾಗಿರುವ ಬಿಕರ್ನಕಟ್ಟೆ ಬಾಲಯೇಸುವಿನ ಕ್ಷೇತ್ರದಲ್ಲಿ ಮೂರು ದಿನಗಳ ಕಾಲ ವಾರ್ಷಿಕ ಹಬ್ಬ ಜರಗಲಿದ್ದು, ಜನವರಿ 14ರ ಗುರುವಾರದಂದು ಮೊದಲ ದಿನದ ವಾರ್ಷಿಕ ಮಹೋತ್ಸವವನ್ನು ವಿಜೃಂಭನೆಯಿಂದ ಆಚರಿಸಲಾಯಿತು.

































ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್ ಅತೀ ವಂ. ಡಾ. ಫ್ರಾನ್ಸಿಸ್ ಸೆರಾವೊ ದಿವ್ಯ ಬಲಿಪೂಜೆಯನ್ನು ನೆರವೇರಿಸಿ ಹಬ್ಬದ ಸಂದೇಶ ನೀಡಿದರು. ಜಾತಿ ಮತ್ತು ಧರ್ಮಗಳಲ್ಲಿ ತಾರತಮ್ಯ ಮಾಡದೆ ಎಲ್ಲರನ್ನೂ ಪ್ರೀತಿಸುವ ಮೂಲಕ ಪರಸ್ಪರ ಸಹೋದರತೆಯಿಂದ ಬಾಳುವ ಮೂಲಕ ಉತ್ತಮ ಸಮಾಜ ನಿರ್ಮಿಸುವ ಎಂಬ ವಿಚಾರವನ್ನು ತಮ್ಮ ಸಂದೇಶದಲ್ಲಿ ತಿಳಿಸಿದರು.
ಕಾರ್ಮೆಲ್ ಪ್ರೋವಿನ್ಸ್ ನ ಪ್ರೊವಿನ್ಸಿಯಲ್ ಫಾ. ಜೇಮ್ಸ್ ಡಿಸೋಜ, ಬಾಲಯೇಸು ಕ್ಷೇತ್ರದ ಹಿರಿಯ ಗುರುಗಳಾದ ಫಾ. ಚಾಲ್ಸ್ ಸೆರಾವೊ, ಕ್ಷೇತ್ರದ ನಿರ್ದೇಶಕರಾದ ಫಾ. ರೋವೆಲ್, ಫಾ. ಲ್ಯಾನ್ಸಿ ಲೂವಿಸ್, ಫಾ. ಬಾರ್ನಬಸ್ ಮೊನಿಸ್, ಫಾ. ಮೆಲ್ವಿನ್ ಮತ್ತಿತರರು ಈ ಸಂದರ್ಭದಲ್ಲಿ ಭಾಗಿಗಳಾಗಿದ್ದರು. ಇನ್ನು ಜನವರಿ 15 ಹಾಗೂ ಜನವರಿ 16ರಂದು ವಾರ್ಷಿಕ ಮಹೋತ್ಸವ ಜರಗಲಿದೆ.