ಮಂಗಳೂರು, ಜ.15 (DaijiworldNews/PY): ಪಾದಾಚಾರಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಅಪ್ರಾಪ್ತ ವಯಸ್ಸಿನ ಆರೋಪಿಯನ್ನು ಸ್ಥಳೀಯರು ಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ ಘಟನೆ ಜ.15ರ ಶುಕ್ರವಾರದಂದು ನಡೆದಿದೆ.






ಬಂಡಿಕೋಟ್ಯ, ಉಳ್ಳಾಲದ ಮಹಿಳೆಯರು ಆರೋಪಿಯ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಉಳ್ಳಾಲ ಬಂಡಿಕೋಟ್ಯ, ಗೊಳಿಯಡಿ ರಸ್ತೆಯಾಗಿ ಮಹಿಳೆಯರು ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ರಸ್ತೆಯ ಬದಿಯ ಓಣಿಯಲ್ಲಿ ಬೈಕ್ನಲ್ಲಿ ಬರುವ ಆಗಂತುಕರು ಮಹಿಳೆಯ ಮೈ ಸವರಿಕೊಂಡು ಹೋಗುತ್ತಿದ್ದು, ಕಳೆದ 15 ದಿನಗಳಿಂದ ಈ ರೀತಿಯಾದ ಘಟನೆಗಳು ನಡೆದಿತ್ತು.
ಇತ್ತೀಚೆಗೆ ಮೂರು, ನಾಲ್ಕು ಬಾರಿ ಈ ರೀತಿಯಾದ ಘಟನೆಗಳು ನಡೆದಿತ್ತು. ಶುಕ್ರವಾರವೂ ಕೂಡಾ ಇಂತಹ ಘಟನೆ ನಡೆದ ಸಂದರ್ಭ ಸ್ಥಳೀಯರು 16 ವರ್ಷದ ಅಪ್ರಾಪ್ತ ವಯಸ್ಸಿನ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.