ಉಡುಪಿ, ಜ. 15 (DaijiworldNews/MB) : ಮಣಿಪಾಲ ತಾಂತ್ರಿಕ ವಿದ್ಯಾಲಯದ ಗಣಿತಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಿ. ಅನುರಾಧ ಅವರು ಡಾ. ಶ್ರೀವತ್ಸಕುಮಾರ್ ಬಿ. ಆರ್. ಇವರ ಮಾರ್ಗದರ್ಶನದಲ್ಲಿ ಮಂಡಿಸಿದ "ಸಂ ಸ್ಟಡೀಸ್ ಆನ್ ತೀಟಾ ಫಂಕ್ಷನ್ಸ್ ಅಂಡ್ ದೇರ್ ಅಪ್ಲಿಕೇಶನ್ಸ್" ಎಂಬ ಮಹಾಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ಮಣಿಪಾಲವು ಪಿ. ಎಚ್, ಡಿ. ಪದವಿ ಪ್ರದಾನ ಮಾಡಿದೆ.

ಡಾ. ಡಿ. ಅನುರಾಧ ಅವರು ಉಡುಪಿ ನಿವಾಸಿ ದಿ| ದೇವದಾಸ್ ನಾಯಕ್ ಮತ್ತು ಶ್ರೀಮತಿ ಉದಯ ನಾಯಕ್ ಅವರ ಸುಪುತ್ರಿ ಹಾಗೂ ರವಿಕಿರಣ ಬಿ ಪೈ ಅವರ ಧರ್ಮಪತ್ನಿಯಾಗಿದ್ದಾರೆ. ಇವರಿಗೆ ಮಗಳು ಆಕಾಂಕ್ಷಾ ಆರ್ ಪೈ ಮತ್ತು ಕುಟುಂಬದ ಎಲ್ಲಾ ಸದಸ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.