ಮಂಗಳೂರು, ಜ. 16 (DaijiworldNews/MB) : ಉಳ್ಳಾಲದ ಸಮ್ಮರ್ ಸ್ಯಾಂಡ್ ಬೀಚ್ಗೆ ಬೆಂಗಳೂರು ಮೂಲದ ಕುಟುಂಬವನ್ನು ಕರೆತಂದ ಕಾರು ಚಾಲಕ ಜನವರಿ 15 ಶುಕ್ರವಾರ ಬೀಚ್ನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮೃತ ಚಾಲಕನನ್ನು ಬೆಂಗಳೂರಿನ ನಾಗರಾಜ್ (34) ಎಂದು ಗುರುತಿಸಲಾಗಿದೆ.
ಗುರುವಾರ ಬೆಂಗಳೂರಿನ ಕುಟುಂಬವೊಂದರ ಕಾರಿನ ಚಾಲಕನಾಗಿ ಬೆಂಗಳೂರಿನಿಂದ ಉಳ್ಳಾಲಕ್ಕೆ ಆಗಮಿಸಿದ್ದ ಅವರು ಶುಕ್ರವಾರ ಬೀಚ್ನಲ್ಲಿ ಆಟವಾಡುತ್ತಿದ್ದ ಸಂದರ್ಭ ಅಲೆಯ ರಭಸಕ್ಕೆ ಸಮುದ್ರ ಪಾಲಾಗಿದ್ದಾರೆ. ಅವರ ಕೂಗು ಕೇಳಿದ ಸ್ಥಳೀಯ ಜೀವ ರಕ್ಷಕರು ಚಾಲಕನ ರಕ್ಷಣೆಗೆ ಧಾವಿಸಿದರೂ, ಅವರ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.
ಸಾಮಾನ್ಯವಾಗಿ ಜೀವರಕ್ಷಕರು ಮತ್ತು ಸ್ಥಳೀಯ ಮೀನುಗಾರರು ಉಳ್ಳಾಲದ ಮೊಗವೀರಪಟ್ನಾ ಕಡಲತೀರದಲ್ಲಿ ಯಾರಾದರೂ ಅಪಾಯಕ್ಕೆ ಒಳಗಾದರೆ ಅವರನ್ನು ರಕ್ಷಿಸುವ ಕಾರ್ಯ ಮಾಡುತ್ತಾರೆ. ಆದರೆ ಈ ದುರಂತವು ಸುಮಾರು 200 ಮೀಟರ್ ದೂರದಲ್ಲಿ ನಡೆದಿದ್ದು ಅಲ್ಲಿಗೆ ಜನರು ತಲುಪುವ ವೇಳೆಗೆ ನಾಗರಾಜ್ ನೀರಿನಲ್ಲಿ ಮುಳುಗಿ ಆಗಿತ್ತು ಎಂದು ವರದಿಯಾಗಿದೆ.
ನಾಗರಾಜ್ರೊಂದಿಗೆ ಪ್ರವಾಸಕ್ಕೆ ಆಗಮಿಸಿದವರು, ನಾಗರಾಜ್ ಅವರ ಕುಟುಂಬದ ಏಕೈಕ ದುಡಿಮೆದಾರ ಎಂದು ತಿಳಿಸಿದ್ದಾರೆ. ಪ್ರಸ್ತುತ ಈ ಅಸ್ವಾಭಾವಿಕ ಸಾವಿಗೆ ಸಂಬಂಧಿಸಿದ ಪ್ರಕರಣವನ್ನು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.