ಉಡುಪಿ, ಸೆ 27: ನಗರಸಭೆಯಲ್ಲಿ ಆಡಳಿತ ವ್ಯವಸ್ಥೆ ಹದೆಗೆಟ್ಟಿದ್ದೂ ಭ್ರಷ್ಟಾಚಾರ ತಾಂಡವಾಡುತ್ತಿದೆ. ಸ್ವತಃ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ನಗರಸಭೆ ಕಮೀಷನರ್ನ್ನು ಉಡುಪಿಯಿಂದ ಬೇರೆಡೆ ವರ್ಗಾಯಿಸಬೇಕೆಂದು, ಉಡುಪಿ ನಗರ ಬಿಜೆಪಿ ಆಗ್ರಹಿಸಿದೆ. ಈ ಬಗ್ಗೆ ಉಡುಪಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಅವರು ಮಾತನಾಡಿದರು ಉಡುಪಿ ನಗರಸಭೆಯ ಅಧಿವೇಶನಗಳು ಸರಿಯಾಗಿ ನಡೆಯುತ್ತಿಲ್ಲ. ನಗರಸಭೆ ನಿಯಾಮವಳಿಗಳನ್ನು ಮೀರಿ ಆಡಳಿತ ಪಕ್ಷ ನಗರಸಭೆ ಕಲಾಪವನ್ನು ಮುಂದುವರಿಸುತ್ತಿದ್ರೂ ಪೌರಯುಕ್ತರು ಮಾತ್ರ ಮೂಕ ಪಕ್ಷಿಯಂತೆ ಆಡಳಿತ ಪಕ್ಷದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ನಗರಸಭೆ ವ್ಯವಸ್ಥೆಯಲ್ಲಿ ಕೂಡಾ ಭ್ರಷ್ಟಾಚಾರ ತುಂಬಿಕೊಂಡಿವೆ. ಅಧಿಕಾರಿಗಳು ಜನರಿಂದ ಹಣವನ್ನು ಭ್ರಷ್ಟಚಾರದ ರೂಪದಲ್ಲಿ ವಸೂಲಿ ಮಾಡುತ್ತಿದ್ದಾರೆ. ವಿಪರ್ಯಾಸ ಎಂದ್ರೆ ಸ್ವತಃ ಪೌರಯುಕ್ತರೇ ಲಂಚದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಕೂಡಲೇ ಅವರನ್ನು ಉಡುಪಿ ನಗರಸಭೆಯಿಂದ ಬೇರೆ ಇಲಾಖೆಗೆ ವರ್ಗಾಯಿಸಿ ಉಡುಪಿಗೆ ಪ್ರಮಾಣಿಕ ಹಾಗೂ ಸೂಕ್ತ ಅಧಿಕಾರಿಯನ್ನು ಸರಕಾರ ನೇಮಕ ಮಾಡಬೇಕು. ಇಲ್ಲವಾದ್ದಲ್ಲಿ ನಗರಸಭೆ ಪೌರಯುಕ್ತರು ಹಾಗೂ ನಗರಸಭೆ ಆಡಳಿತ ವೈಪಲ್ಯದ ಬಗ್ಗೆ ಜಿಲ್ಲಾ ಬಿಜೆಪಿ ಜನರಲ್ಲಿ ಜಾಗೃತಿ ಮೂಡಿಸುವುದಲ್ಲದೇ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.