ಮಂಗಳೂರು, ಜ. 17 (DaijiworldNews/MB) : ಜನವರಿ 17 ರ ಭಾನುವಾರ ಮುಂಜಾನೆ ಕಂಕನಾಡಿ ಜಂಕ್ಷನ್ನಲ್ಲಿ ಬಸ್ ಮತ್ತು ಲಾರಿ ಡಿಕ್ಕಿ ಹೊಡೆದಿದೆ.

ಬಸ್ನಲ್ಲಿದ್ದ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಆದರೆ ಯಾವುದೇ ದೊಡ್ಡ ಅಪಘಾತ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಬಸ್ ಮತ್ತು ಲಾರಿ ಎರಡೂ ಮಂಗಳದೇವಿಗೆ ಹೋಗುತ್ತಿದ್ದವು. ಎಡಕ್ಕೆ ತಿರುಗುವ ಸಂದರ್ಭ ಪಂಪ್ವೆಲ್ ಕಡೆಗೆ ಚಲಿಸುತ್ತಿದ್ದ ಲಾರಿ ಬಸ್ಗೆ ಡಿಕ್ಕಿ ಹೊಡೆದಿದೆ.
ಅಪಘಾತದಿಂದಾಗಿ ಸ್ವಲ್ಪ ಸಮಯದವರೆಗೆ ಸಂಚಾರ ಅಡಚಣೆ ಉಂಟಾಯಿತು. ಕದ್ರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿದ್ದಾರೆ.