ಸುಳ್ಯ, ಜ. 17 (DaijiworldNews/MB) : ಅರಂತೋಡಿನ ಕೊಡಂಕೇರಿ ಬಳಿ ಮೈಸೂರಿನಿಂದ ಮಂಗಳೂರಿಗೆ ಬಿಯರ್ ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ತಡರಾತ್ರಿ 1 ಗಂಟೆ ಸುಮಾರಿಗೆ ನಡೆದಿದೆ.


ಅಪಘಾತದಲ್ಲಿ ಚಾಲಕ ಹಾಗೂ ಲಾರಿ ಕ್ಲಿನರ್ ಅಪಾಯದಿಂದ ಪಾರಾಗಿದ್ದಾರೆ. ಆದರೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದಿದೆ.
ಇನ್ನು ಲಾರಿಯಲ್ಲಿ ಸುಮಾರು ರೂ. 45 ಲಕ್ಷ ಮೌಲ್ಯದ ಬಿಯರ್ ಇತ್ತು ಎಂದು ವರದಿಯಾಗಿದೆ.
ಬಿಯರ್ ತುಂಬಿದ ಲಾರಿ ಮಗುಚಿ ಬಿದ್ದ ಸುದ್ದಿ ತಿಳಿದ ಹಿನ್ನೆಲೆ ಸ್ಥಳದಲ್ಲಿ ಜನರು ಸೇರುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.