ಮಂಗಳೂರು, ಜ.17 (DaijiworldNews/PY): ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ನಗರದ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆಯ ಚುನಾವಣಾ ಪ್ರಕ್ರಿಯೆಯು ಜ.17ರ ರವಿವಾರ ಸ್ಟೇಟ್ ಬ್ಯಾಂಕ್ ಬಳಿಯ ತುಳುನಾಡ ರಕ್ಷಣಾ ವೇದಿಕೆಯ ಕೇಂದ್ರ ಕಚೇರಿಯಲ್ಲಿ ನಡೆಯಿತು.

2021-23 ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ರಮೇಶ್ ಪೂಜಾರಿ ಶೀರೂರು, ಉಪಾಧ್ಯಕ್ಷರಾಗಿ ಜೋಸೆಫ್ ಲೋಬೋ ಉರ್ವ ಅವರನ್ನು ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಫಾರೂಕ್ ಗೋಲ್ಡ್ನ ಮುನೀರ್ ಮುಕ್ಕಚೇರಿ, ಜೊತೆ ಕಾರ್ಯದರ್ಶಿಯಾಗಿ ಮುಸ್ತಾಕ್, ಕ್ರೀಡಾ ಕಾರ್ಯದರ್ಶಿಯಾಗಿ ಹರೀಶ್ ಶೆಟ್ಟಿ ಶಕ್ತಿ ನಗರ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಆಶೀಶ್ ಅಂಚನ್ ಬಿಜೈ, ಸಂಘಟನಾ ಕಾರ್ಯದರ್ಶಿಯಾಗಿ ರಕ್ಷಿತ್ ಬಂಗೇರ ಕುಡುಪು, ಕೋಶಾಧಿಕಾರಿಯಾಗಿ ರೋಶನ್ ಡಿಸೋಜಾ ಶೇಡಿಗುರಿ ಅವರನ್ನು ಆಯ್ಕೆ ಮಾಡಲಾಗಿದೆ.
ಯುವ ಘಟಕದ ಅಧ್ಯಕ್ಷರಾಗಿ ಕೆ.ವಿವೇಕಾನಂದ ರಾವ್ ಜಪ್ಪು, ಪ್ರಧಾನ ಕಾರ್ಯದರ್ಶಿಯಾಗಿ ಶೋನ್ ಡಿಸೋಜಾ, ಜೊತೆ ಕಾರ್ಯಾದರ್ಶಿಯಾಗಿ ಇರ್ಫಾನ್, ಶಿವಪ್ರಸಾದ್, ವಿವಿಯಾನ್ ಡಿಸೋಜಾ ಹಾಗೂ ಮಹಿಳಾ ಘಟಕದ ಅಧ್ಯಕ್ಷರಾಗಿ ವರ್ಷಿತಾ ಅವರನ್ನು ಆಯ್ಕೆ ಮಾಡಲಾಯಿತು.