ಕಾರ್ಕಳ,ಜ.17 (DaijiworldNews/HR): "ಸಂತಲಾರೆನ್ಸ್ ಪುಣ್ಯ ಕ್ಷೇತ್ರ ಸರ್ವ ಧರ್ಮ ಸಮನ್ವಯ ಸಾರುವ ಧಾರ್ಮಿಕ ಕೇಂದ್ರವಾಗಿದ್ದು, ಪ್ರಾವಿತ್ರತ್ಯೆ ಹೆಸರಾಗಿರುವುದರಿಂದಲೇ ಈ ಪುಣ್ಯಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿರಲು ಕಾರಣವಾಗಿದೆ. ಕೊರೊನಾ ಹಿನ್ನಲ್ಲೆಯಲ್ಲಿ ಕೆಲವೊಂದು ಕಾರ್ಯಕ್ರಮಗಳನ್ನು ಮೊಟಕುಗೊಳಿಸಿದರೂ ಧಾರ್ಮಿಕ ಕಾರ್ಯಕ್ರಮಗಳಿಗೆ ಯಾವುದೇ ಅಡ್ಡಿ ಆತಂಕಗಳು ಇರಬಾರದು. ಅತ್ತೂರು ಜಾತ್ರೆಯು ಹತ್ತೂರಿಗೆ ಹಬ್ಬವಾಗಿದೆ. ಶಾಂತಿ,ಸೌಹಾರ್ದತೆಯಿಂದ ವಾರ್ಷೀಕೋತ್ಸವವು ಯಶಸ್ಸಿಯಾಗಿ ಜರುಗಲಿ" ಎಂದು ಶಾಸಕ ಹಾಗೂ ಸರಕಾರದ ಮುಖ್ಯ ಸಚೇತಕ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.




ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಇದರ ವಾರ್ಷಿಕ ಹಬ್ಬದ ಅಂಗವಾಗಿ ಪೂರ್ವಭಾವಿಯಾಗಿ ರವಿವಾರದಂದು ನೊವೆನಾ ಪ್ರಾರ್ಥನೆಗೆ ಚಾಲನೆ ನೀಡಿ ಅವರು ಶುಭಹಾರೈಸಿದರು.
ಪವಿತ್ರ ಬಲಿಪೂಜೆ, ಆರಾಧನೆ ಮತ್ತು ಸಂತ ಸೆಬಾಸ್ಟಿಯನ್ನರ ಮೂರ್ತಿಯ ಮೆರವಣಿಗೆಯು ನಡೆಯಿತು.
ಕೊರೊನಾ ಕಾರಣದಿಂದಾಗಿ ಈ ಬಾರಿ ನೊವೆನಾ ಪ್ರಾರ್ಥನೆ ಮತ್ತು ವಾರ್ಷಿಕ ಹಬ್ಬವನ್ನು ಸರಳವಾಗಿ ಆಚರಿಸಲಾಗುವುದು. ಭಕ್ತಾಧಿಗಳ ಅನುಕೂಲ ಮತ್ತು ಕೊರೊನಾ ನಿಯಮಾವಳಿಗಳ ಕಾರಣದಿಂದಾಗಿ ದಿನಂಪ್ರತಿ 5 ಬಲಿಪೂಜೆಗಳು ನಡೆಯಲಿವೆ. ಬೆಳಗ್ಗೆ 8 ರಿಂದ ಆರಂಭವಾಗಿ ಸಂಜೆ 5ಗಂಟೆಯವರೆಗೆ ಬಲಿ ಪೂಜೆಗಳು ನಡೆಯಲಿವೆ.
ಭಕ್ತಾಧಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಬಲಿಪೂಜೆಗಳಲ್ಲಿ ಭಾಗವಹಿಸಬೇಕು ಎಂದು ಆಡಳಿತ ಮಂಡಳಿ ಪರವಾಗಿ ಸಂತ ಲಾರೆನ್ಸ್ ಬಸಿಲಿಕಾದ ನಿರ್ದೇಶಕರಾದ ಫಾದರ್ ಜೋರ್ಜ್ ಡಿಸೋಜಾ ವಿನಂತಿ ಮಾಡಿಕೊಂಡಿದ್ದಾರೆ.
ಸಹಾಯಕ ಧರ್ಮಗುರುಗಳಾದ ಫಾದರ್ ಮೆಲ್ವಿನ್ ರೊಯ್ ಲೋಬೋ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ್ಯ ಸಂತೋಷ್ ಡಿಸಿಲ್ವಾ, ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಬೆನಡಿಕ್ಟಾ ನೋರೋನ್ಹಾ, ಜಿಲ್ಲಾ ಪಂಚಾಯತ್ ಸದಸ್ಸೆ ರೇಶ್ಮಾ ಶೆಟ್ಟಿ, ಉಪಸ್ಥಿತರಿದ್ದರು.