ಕಾಸರಗೋಡು, ಜ.18 (DaijiworldNews/HR): ನಗದು ದರೋಡೆ ಸೇರಿದಂತೆ ಹಲವು ಪ್ರಕರಣಗಳ ಆರೋಪಿಯೋರ್ವನನ್ನು ಕುಂಬಳೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಬಂಧಿತನನ್ನು ಕುಂಬಳೆ ಕೊಯಿಪಾಡಿ ಕಡಪ್ಪುರದ ಆಸಿಫ್(28) ಎಂದು ಗುರುತಿಸಲಾಗಿದೆ.
ಕುಂಬಳೆಯಲ್ಲಿ ವ್ಯಕ್ತಿಯೋರ್ವನಿಂದ ಹತ್ತು ಸಾವಿರ ರೂ. ಹಣ ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಶಾಮೀಲಾಗಿದ್ದ ಈತ ತಮಿಳುನಾಡಿನಲ್ಲಿ ತಲೆ ಮರೆಸಿಕೊಂಡಿದ್ದನು.
ಆಸಿಫ್ ಊರಿಗೆ ಬಂದಿರುವ ಬಗ್ಗೆ ಪೊಲೀಸರಿಗೆ ಲಭಿಸಿದ ಮಾಹಿತಿಯಂತೆ ಆತನನ್ನು ಬಂಧಿಸಲಾಗಿದೆ.