ಮಂಗಳೂರು, ಜ. 18 (DaijiworldNews/MB) : ಮುಲ್ಕಿ-ಕಿನ್ನಿಗೋಲಿ ರಾಜ್ಯ ಹೆದ್ದಾರಿಯ ಕೆಂಚನಕೆರೆ ರಸ್ತೆ ತಿರುವಿನಲ್ಲಿ ಜನವರಿ 17 ರ ರವಿವಾರ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ವಿಲೇವಾರಿ ಮಾಡಲಾದ ಮಾನವ ಭ್ರೂಣದ ಕೊಳೆತ ಅವಶೇಷಗಳು ಪತ್ತೆಯಾಗಿದೆ. ಎಸೆದ ಸ್ಥಳದಲ್ಲಿ ದುರ್ವಾಸನೆ ಹರಡಿದೆ.

ಕಿಲ್ಪಾಡಿ ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕರು ತ್ಯಾಜ್ಯ ವಿಲೇವಾರಿ ಮಾಡುವಾಗ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿದ ಭ್ರೂಣ ಪತ್ತೆಯಾಗಿದೆ. ಪ್ಲಾಸ್ಟಿಕ್ ಚೀಲದಲ್ಲಿ ಎರಡು ಕೈ ಕೈಗವಸುಗಳು ಮತ್ತು ಪ್ಯಾಡ್ ಜೊತೆಗೆ ಕೊಳೆತ ಭ್ರೂಣವೂ ದೊರಕಿದೆ. ಅದರ ಪಕ್ಕದಲ್ಲಿ ದೊರೆತ ಮತ್ತೊಂದು ಚೀಲದಲ್ಲಿ ಸ್ಯಾನಿಟರಿ ಪ್ಯಾಡ್, ನೈಟಿ ಮತ್ತು ಬಟ್ಟೆಗಳು ಇದ್ದವು.
ಕಳೆದ ವಾರ ಇಲ್ಲಿ ಮಳೆಯಾದ ಸಂದರ್ಭ ಪ್ಲಾಸ್ಟಿಕ್ ಚೀಲಕ್ಕೆ ನೀರು ನುಗ್ಗಿ ಭ್ರೂಣ ಕೊಳೆತು ಹೋಗಿರಬಹುದು ಎಂದು ಶಂಕಿಸಲಾಗಿದೆ.
ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.