ಕಾರ್ಕಳ, ಜ.18 (DaijiworldNews/HR): "ಪ್ರತಿಗ್ರಾಮ ಪಂಚಾಯತ್ಗಳಲ್ಲಿ ಮಣ್ಣು ಪರೀಕ್ಷೆ ಘಟಕ ಆರಂಭಿಸುವ ಯೋಜನೆ ರಾಜ್ಯ ಸರಕಾರದ ಮುಂದಿದ್ದು ಯೋಜನೆಯ ಪ್ರಸ್ತಾವನೆ ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದೆ. ಕೃಷಿ ಸಂಜೀವಿನಿ ಮೂಲಕ ರೈತರ ಹೊಲಕ್ಕೆ ಭೇಟಿನೀಡಿ ಸಮಸ್ಸೆ ನಿವರಣೆಗೆ ಮಾರ್ಗದರ್ಶನ ನೀಡಲಾಗುವುದು. ಹೀಗಾಗಲೇ 40 ವಾಹನಗಳನ್ನು ಅದಕ್ಕಾಗಿ ವಿನಿಯೋಗಿಸಲಾಗಿದೆ. ಕೊಪಪ್ಪಳ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ 40 ವಾಹನಗಳನ್ನು 20 ರೈತ ಕೇಂದ್ರಕ್ಕೆ ನೀಡಲಾಗಿದೆ. ಮುಂದಿನ ವರ್ವಗಳಲ್ಲಿ ಈ ಯೋಜನೆ ಇತರ ಜಿಲ್ಲೆಗಳಿಗೆ ವಿಸ್ತರಿಸುವ ಯೋಚನೆ ಇದೆ" ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.



ಕುಕ್ಕುಂದೂರು ಗ್ರಾಮ ಪಂಚಾಯತ್ ಮೈದಾನದಲ್ಲಿ ಸೋಮವಾರದಂದು ಕಾರ್ಲ ಕಜೆ ಮುದ್ರಾಂಕ ಬಿಡುಗಡೆ ಹಾಗೂ ರೈತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, "ಕಾರ್ಲ ಕಜೆಯ ಮೂಲಕ ರೈತರಿಗೆ ಬೆನ್ನೆಲುಬಾಗಿ ನಿಂತು ರೈತರ ಬ್ರಾಂಡ್ ಬಿಡುಗಡೆಗೆ ಶಾಸಕ ವಿ.ಸುನೀಲ್ ಕುಮಾರ್ ಕಾರಣರಾಗಿದ್ದಾರೆ. ಕೃಷಿ ಸಚಿವನಾಗಿ ರಿಬ್ಬನ್ ಕತ್ತರಿಸಲು, ಗುದ್ದಲಿ ಪೂಜೆಗೆ ಸೀಮಿತನಾಗಿದ್ದ ನಾನು ಇದೇ ಮೊದಲಭಾರಿಗೆ ಉತ್ಪಾದನ ಬ್ರಾಂಡ್ವೊಂದನ್ನು ಲೋರ್ಕಣೆಗೈಯುತ್ತಿರುವುದು ಸಚಿವ ಸ್ಥಾನದಲ್ಲಿ ನನಗೆ ಖುಷಿ ತಂದಿದೆ. ಕಾರ್ಲ ಕಜೆಯ ಕುರಿತು ಡಿಎನ್ಎ ಪರೀಕ್ಷೆ,ಸಂಶೋಧನೆ ನಡೆಸಿ ಪ್ರಮಾಣ ಪತ್ರ ಅತೀ ಶೀಘ್ರದಲ್ಲಿ ದೊರಕಿಸಿ ಕೊಡುವಲ್ಲಿ ಇಲಾಖಾಧಿಕಾರಿಗಳು ಮುಂದಾಗಬೇಕೆಂದರು. ಜೊತೆಗೆ ಬೆಂಬಲ ಬೆಲೆ ನಿಗದಿ ಪಡಿಸಬೇಕು. ದೇಶ ಕರೋನಾ ಸಂಕಷ್ಟ ಎದುರಿಸುತ್ತಿದ್ದ ದಿನಗಳಲ್ಲಿ ನಾಗರಿಕರು ಮನೆಯೊಳಗೆ ಕುಳಿತು ದಿನಗಳನ್ನು ಕಳೆಯಲು ಕಾರಣವಾಗಿರುವುದೇ ರೈತರು ಬೆಳೆಸಿದ ಬೆಳೆಯಾಗಿದೆ" ಎಂದರು.
ಇನ್ನು "ಸ್ವಾಭಿಮಾನ ರೈತ ಕಾರ್ಡನ್ನು ರಾಜ್ಯ ಸರಕಾರ ಬಿಡುಗಡೆಗೊಳಿಸಿದ್ದು, 70 ಲಕ್ಷ ರೈತರು ಈ ಕಾರ್ಡ್ ಫಲಾನುಭವಿಗಳಾಗಲಿದ್ದಾರೆ. ಅದರಲ್ಲಿ ರೈತರನ ಎಲ್ಲ ಮಾಹಿತಿಗಳು ಅಡಕವಾಗಿರುತ್ತದೆ. ಅದರಿಂದ ಆರ್.ಟಿ.ಸಿ. ಇತರ ದಾಖಲೆ ಪತ್ರಗಳನ್ನು ಕಚೇರಿ ಹಿಡಿದುಕೊಂಡು ಅಲೆದಾಡುವ ಪ್ರಮೇಹ ಎದುರಾಗುವುದಿಲ್ಲ. ಆ ಕಾರ್ಡ್ ರೈತರ ಪಾಲಿಗೆ ದೊರೆತ್ತಾಗ ಸ್ವಾಭಿಮಾನಿ ರೈತ ಎಂದು ಎದೆ ತಟ್ಟಿ ಹೇಳಿಸಿಕೊಳ್ಳಬಹದುದೆಂದು ರೈತರಿಗೆ ಹುರಿದುಂಬಿಸಿದರು".
ಶಾಸಕ ಹಾಗೂ ಸರಕಾರದ ಮುಖ್ಯ ಸಚೇತಕ ವಿ.ಸುನೀಲ್ ಕುಮಾರ್ ಅಧ್ಯಕ್ಷತೆವಹಿಸಿ ಮಾತನಾಡಿ, "ರೈತರು ಬೆಳೆಸುವ ಬೆಳೆಗೆ ಮುದ್ರಾಂಕ ದೊರೆತ್ತಾಗ ಸರಕಾರದ ಮಾನ್ಯತೆಯಿಂದ ಕೃಷಿಕರಿಗೆ ಹೆಚ್ಚಿನ ರಈತಿಯಲ್ಲಿ ಪ್ರಯೋಜನವಾಗುವ ಮೂಲಕ ಆ ಉತ್ಪನ್ನ ಹೆಚ್ಚು ಪ್ರಸಿದ್ಧಿ ಹೊಂದುವ ಜೊತೆಗೆ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನ ದೊರಕಲು ಸಾಧ್ಯ. ಮುಂದ್ರಾಕ ವೊಂದಿದ್ದ ಉತ್ಪನ್ನಗಳಿಗೆ ಸರಕಾರದಿಂದ ಮಾನ್ಯತೆ ದೊರೆತಾಗ ಬೆಂಬಲ ಬೆಲೆಗಳ ಜೊತೆಗೆ ಇತರ ಸವಲತ್ತಲು ಪಡೆಯಲು ಅನುಕೂಲವಾಗಲಿದೆ. 6500 ಎಕ್ಟೇರ್ ಪ್ರದೇಶದಲ್ಲಿ ಭತ ಬೆಳೆಸಲಾಗುತ್ತಿದ್ದು, ಅದರಲ್ಲಿ 1000 ಎಕ್ಟರ್ ಕಾರ್ಲ ಕಜೆ ಬೆಳೆಯನ್ನು ಬೆಳೆಸಲಾಗುತ್ತಿದೆ. ಕಾರ್ಲ ಕಜೆ ಇದೀಗ 5000 ಕ್ವಿಂಟಾಲ್ ಉತ್ಪಾದನೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಉತ್ತಮಬೆಲೆ ದೊರಕುವುದರಿಂದ ಉತ್ಪಾದನೆ ಹೆಚ್ಚಳವಾಗಲಿದೆ" ಎಂದರು.
ಗೇರುಬೀಜ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಕರಾವಳಿ ಪ್ರಾಧಿಕಾರ ದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯೀ ಸಮಿತಿ ಅಧ್ಯಕ್ಷ ಸುಮೀತ್ ಶೆಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಮಡಿವಾಳ, ಉಪಾಧ್ಯಕ್ಷ ಹರೀಶ್ ನಾಯಕ್, ಹೆಬ್ರಿ ತಾಲೂಕು ಪಂಚಾಯತ್ ಅಧ್ಯಕ್ಷ ರಮೇಶ್ ಪೂಜಾರಿ, ಪುರಸಭಾ ಅಧ್ಯಕ್ಷೆ ಸುಮಾ, ಉಪಾಧ್ಯಕ್ಷೆ ಪಲ್ಲವಿ ರಾವ್, ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಉದಯ ಎಸ್.ಕೋಟ್ಯಾನ್, ರವಿಪ್ರಕಾಶ್ ಪ್ರಭು, ರೇಷ್ಮಾ ಶೆಟ್ಟಿ, ಜ್ಯೋತಿ ಪೂಜಾರಿ, ಭಾರತೀಯ ಕಿಸಾನ್ ಸಂಘದ ಉಪಾಧ್ಯಕ್ಷ ಉಮಾಕಾಂತ ರಾನಡೆ, ಕಾರ್ಕಳ ಎಪಿಎಂಸಿ ಅಧ್ಯಕ್ಷ ಮೋಹನ್ ದಾಸ್ ಶೆಟ್ಟಿ, ಕಾರ್ಕಳ ತೋಟಗಾರಿಕೆ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ಅಂತೋನಿ ಡಿಸೋಜಾ ನಕ್ರೆ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ. ಎಮ್.ಕೆ. ನಾಯ್ಕ್, ಉಡುಪಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಡಾ. ನವೀನ್ ಭಟ್, ಉಡುಪಿ ತೋಟಗಾರಿಕೆ ಉಪನಿರ್ದೇಶಕಿ ಭುವನೇಶ್ವರಿ ಉಪಸ್ಥಿತರಿದ್ದರು.