ಉಡುಪಿ, ಜ.18 (DaijiworldNews/HR): ದೈಜಿವರ್ಲ್ಡ್ ಮೀಡಿಯಾ ಗ್ರೂಪ್ನ ಪ್ರಧಾನ ಸಂಪಾದಕ ವಾಲ್ಟರ್ ನಂದಳಿಕೆ ಮತ್ತು ಪ್ರಸಿದ್ಧ ಹಾಸ್ಯನಟ ಅರವಿಂದ್ ಬೋಳಾರ್ ಅವರು ಪಡುಬಿದ್ರಿಯಲ್ಲಿ ನೂತನವಾಗಿ ಆರಂಭಗೊಂಡ ಅಪ್ನಾ ವಿಲೇಜ್ ಮಾರ್ಟ್ ಅನ್ನು ಜನವರಿ 18 ರಂದು ಉದ್ಘಾಟಿಸಿದರು.








































ದೈಜಿವರ್ಲ್ಡ್ ವಾಹಿನಿಯಲ್ಲಿ ಪ್ರಸಾರವಾಗುವ ಪ್ರೈವೆಟ್ ಚಾಲೆಂಜ್ ಮೂಲಕ ಕರಾವಳಿಯ ಪ್ರತಿಯೊಂದು ಮನೆಯಲ್ಲೂ ವಾಲ್ಟರ್ ನಂದಳಿಕೆ ಮತ್ತು ಅರವಿಂದ್ ಬೋಳಾರ್ ಜನಪ್ರಿಯರಾಗಿದ್ದಾರೆ.
ಸೂಪರ್ ರ್ಮಾರ್ಕೆಟ್ ಉದ್ಘಾಟಿಸಿ ಬಳಿಕ ಮಾತನಾಡಿದ ವಾಲ್ಟರ್ ನಂದಳಿಕೆ , "ಈ ಬೃಹತ್ ಮತ್ತು ಯೋಜಿತ ಸೂಪರ್ ರ್ಮಾರ್ಕೆಟನ್ನು ಉದ್ಘಾಟಿಸಿದ ನಾನು ಅದೃಷ್ಟವಂತ. ವ್ಯವಹಾರದಲ್ಲಿ ಉತ್ತಮ ಅನುಭವ ಹೊಂದಿರುವವರು 'ಅಪ್ನಾ ವಿಲೇಜ್ ಮಾರ್ಟ್' ನಲ್ಲಿದ್ದಾರೆ. ಅಪ್ನಾ ವಿಲೇಜ್ ಮಾರ್ಟ್ನ ನಿರ್ದೇಶಕರು ಈಗಾಗಲೇ ತಮ್ಮ ಇತರ ವ್ಯವಹಾರಗಳಲ್ಲಿ ಭಾರಿ ಯಶಸ್ಸು ಮತ್ತು ಖ್ಯಾತಿಯನ್ನು ಗಳಿಸಿದ್ದಾರೆ. ಈಗ ಈ ಹೊಸ ಸಾಹಸ ಮಾಡಿದ್ದು, ಪಡುಬಿದ್ರಿ ಪ್ರದೇಶದ ಜನರು ಅವರನ್ನು ಬೆಂಬಲಿಸಿದರೆ ಅವರ ಯಶಸ್ಸು ಖಂಡಿತ. ಹಾಗಾಗಿ ಇಲ್ಲಿ ನೆರೆದಿರುವ ಎಲ್ಲರು ಈ ಮಾರ್ಟ್ ಬಗ್ಗೆ ತಿಳಿದುಕೊಂಡು ಉಳಿದ ಎಲ್ಲರಿಗೂ ಇದರ ಬಗ್ಗೆ ಮಾಹಿತಿ ನೀಡಬೇಕು" ಎಂದು ವಿನಂತಿ ಮಾಡಿಕೊಂಡಿದ್ದಾರೆ.
ನಟ ಅರವಿಂದ್ ಬೋಳಾರ್ ಮಾತನಾಡಿ, "ಪಡುಬಿದ್ರಿಯ ಜನರಿಗಾಗಿ ಈ ಮಾರ್ಟನ್ನು ತೆರೆದಿದ್ದಾರೆ, ನನ್ನ ಪ್ರಕಾರ ಇದು ಈ ಪ್ರದೇಶದ ಮೊದಲ ಸೂಪರ್ ರ್ಮಾರ್ಕೆಟ್ ಆಗಿದ್ದು, ಸುತ್ತಮುತ್ತಲಿನ ಜನರನ್ನು ಖಂಡಿತವಾಗಿಯೂ ಆಕರ್ಷಿಸುತ್ತದೆ. ತರಕಾರಿಗಳು, ಹಣ್ಣುಗಳು, ಮೀನು, ಮಾಂಸ, ಆಟಿಕೆಗಳು ಮತ್ತು ಇನ್ನೂ ಅನೇಕ ಉತ್ಪನ್ನಗಳನ್ನು ನೀಡುವ ಹೊಸ ಮಾರ್ಟ್ಗೆ ಭೇಟಿ ನೀಡುವಂತೆ ನಾನು ಎಲ್ಲರಿಗೂ ವಿನಂತಿಸುತ್ತೇನೆ" ಎಂದರು.
ಪಲಿಮಾರು ಚರ್ಚ್ ನ ಧರ್ಮಗುರು ಫಾ. ರೊಕಿ ಡಿಸೋಜ ಪ್ರಾರ್ಥನೆಯನ್ನು ನಡೆಸಿ ಮಾರ್ಟ್ ಆವರಣವನ್ನು ಆಶೀರ್ವದಿಸಿದರು. ನಿರ್ದೇಶಕರಾದ ಫ್ರಾನ್ಸಿಸ್ ಡಿ'ಸೋಜ, ಪಡುಬಿದ್ರಿ ಬ್ರಹ್ಮಸ್ಥಾನದ ಪಾತ್ರಿ ಪಿ. ಜಿ. ನಾರಾಯಣ ರಾವ್, ಹಾಜಿ ಅಬ್ದುಲ್ ಹಮೀದ್ ಮದನಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಎರ್ಮಾಳ್ ಚರ್ಚ್ ನ ಧರ್ಮಗುರು ಫಾ. ರೊನಾಲ್ಡ್ ಮಿರಾಂದ ಹಾಗೂ ಮತ್ತಿತರು ಅಥಿತಿಗಳಾಗಿ ಉಪಸ್ಥಿತರಿದ್ದರು.