ಉಡುಪಿ, ಜ.19 (DaijiworldNews/MB) : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಎರಡು ದಿನಗಳ ಕಾಲ ಉಡುಪಿ ಭೇಟಿಯ ಸಂದರ್ಭ ಕರ್ನಾಟಕ ಮೀನುಗಾರಿಕೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಬಿಲ್ಲವ ಸಮುದಾಯ ಮತ್ತು ರಾಜ್ಯದ ಇತರ ಉಪಗುಂಪುಗಳಿಗೆ ಸೇರಿದ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ 50 ಕೋಟಿ ರೂ. ಸಾಲ ನೀಡಲು ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ, ಮುಂಬರುವ ಬಜೆಟ್ನಲ್ಲಿ ಈ ಮೊತ್ತವನ್ನು ಸೇರಿಸಲಾಗುವುದ ಎಂದು ಭರವಸೆ ನೀಡಿದರು.
ಸಮುದಾಯದ ಮುಖಂಡ ಬಿ ಎನ್ ಶಂಕರ್ ಪೂಜಾರಿ, ಅಚ್ಯುತ್ ಕಲ್ಮಾಡಿ ಮತ್ತು ನವೀನ್ ಉಪಸ್ಥಿತರಿದ್ದರು.