ಉಡುಪಿ, ಜ.19 (DaijiworldNews/MB) : ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು.



ಬಳಿಕ ಕುಂಭಾಶಿ ಅನೆಗುಡ್ಡೆ ದೇವಸ್ಥಾನಕ್ಕೆ ಸಿಎಂ ಭೇಟಿ ನೀಡಲಿದ್ದು ಆನೆಗುಡ್ಡೆ ದೇವಸ್ಥಾನ ದಲ್ಲಿ 1008 ಗಣಯಾಗದಲ್ಲಿ ಮುಖ್ಯಮಂತ್ರಿಗಳು ಭಾಗಿಯಾಗಲಿದ್ದಾರೆ.
ರಾಜಕೀಯ ಒತ್ತಡದ ನಡುವೆ ಸಿಎಂ ದೇವಸ್ಥಾನ ಭೇಟಿಯು ಮಹತ್ವ ಪಡೆದಿದೆ.
ಸೋಮವಾರ ಮುಖ್ಯಮಂತ್ರಿಗಳು ಶ್ರೀ ಕೃಷ್ಣ ಮಠ, ಕರಂಬಳ್ಳಿ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಉಚ್ಚಿಲ ದೇವಸ್ಥಾನ ಜೀರ್ಣೋದ್ಧಾರದ ಹಂತದಲ್ಲಿದೆ. ಮುಂದೆ ಹೆಜಮಾಡಿ ಕೋಡಿ ಮೀನುಗಾರಿಕಾ ಬಂದರಿನ ಶಿಲಾ ನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಾಗಿಯಾಗಲಿದ್ದಾರೆ.