ಮಂಗಳೂರು, ಜ.20 (DaijiworldNews/MB) : ನಗರದ ಶ್ರೀನಿವಾಸ್ ವಿಶ್ವವಿದ್ಯಾಲಯದ 2020-21 ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮವು ಶ್ರೀನಿವಾಸ್ ವಿಶ್ವವಿದ್ಯಾಲಯದ ಸಿಟಿ ಕ್ಯಾಂಪಸ್ನ ಗ್ಯಾಲರಿ ಹಾಲ್ನಲ್ಲಿ ನಡೆಯಿತು.

ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಎಸ್. ಐತಾಳ್ ಮಾತನಾಡಿ, ''ಸಮಯ ಹೋದಂತೆ ಶಿಕ್ಷಣದಲ್ಲಿ ಆಯಾ ಬದಲಾವಣೆಗಳು ಕಂಡುಕೊಳ್ಳುತ್ತವೆ. ವ್ಯಕ್ತಿಯೊಬ್ಬನ ಆತ್ಮ ವಿಶ್ವಾಸವನ್ನು ಹೆಚ್ಚಿಸುವಲ್ಲಿ ಜ್ಞಾನ, ಕೌಶಲ್ಯ, ಅನುಭವದ ಜೊತೆಗೆ ಸಮಸ್ಯೆ ಹಾಗೂ ಸವಾಲುಗಳನ್ನು ಮೆಟ್ಟಿ ನಿಲ್ಲಲು ಉನ್ನತ ಶಿಕ್ಷಣವು ಸಹಕರಿಸುತ್ತದೆ'' ಎಂದರು.
ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಸಚಿವ ಡಾ ಅನಿಲ್ ಕುಮಾರ್ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಕಾಲೇಜ್ ಆಫ್ ಸೋಶಿಯಲ್ ಸೈನ್ಸ್ ಡೀನ್ ಲವೀನ ಡಿ ಮೆಲ್ಲೊ, ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಡೀನ್ ಡಾ. ತೋಮಸ್ ಪಿಂಟೋ, ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಕಾಮರ್ಸ್ ಡೀನ್ ಪ್ರೊ ಕೀರ್ತನ್ ರಾಜ್, ಕಾಲೇಜ್ ಆಫ್ ಕಂಪ್ಯೂಟರ್ ಅಂಡ್ ಇನ್ಫಾರ್ಮೇಶನ್ ಸೈನ್ಸ್ ಡೀನ್ ಪ್ರೊ. ಶ್ರೀಧರ ಆಚಾರ್ಯ, ಕಾಲೇಜ್ ಆಫ್ ಏವಿಯೇಷನ್ ಸ್ಟಡೀಸ್ ಡೀನ್ ಪ್ರೊ. ಪವಿತ್ರ ಕುಮಾರಿ, ವಿಭಾಗ ಮುಖ್ಯಸ್ಥರು, ಬೋಧಕ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎಂಬಿಎ ವಿಭಾಗ ಸಂಯೋಜಕ ಪ್ರೊ. ಅಮಿತ್ ಡೊನಾಲ್ಡ್ ಮಿನೇಜ್ಹಸ್ ಸ್ವಾಗತಿಸಿ, ಎಂಸಿಎ ವಿಭಾಗ ಸಂಯೋಜಕ ಪ್ರೊ. ವೈಕುಂಟ್ ಪೈ ವಂದಿಸಿದರು. ಡಾ. ವಿದ್ಯಾ ಎನ್ ಕಾರ್ಯಕ್ರಮ ನಿರೂಪಿಸಿದರು.