ಮಂಜೇಶ್ವರ, ಜ.20 (DaijiworldNews/PY): ಗಾಂಜಾ, ಚಿನ್ನಾಭರಣ ವಂಚನೆ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಶಾಮೀಲಾಗಿದ್ದ ಆರೋಪಿಯೋರ್ವನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಹೊಸಂಗಡಿ ರಾಮಂತಳಿಯ ಆಬಿದ್ (22) ಎಂದು ಗುರುತಿಸಲಾಗಿದೆ.
2019ರಲ್ಲಿ ಚಿನ್ನಾಭರಣ ವಂಚನೆ ಹಾಗೂ 2020ರಲ್ಲಿ ಗಾಂಜಾ ಸಾಗಾಟ ಪ್ರಕರಣದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.