ಮಂಗಳೂರು, ಜು 03: ಮಳೆಯಿಂದಾಗಿ ಸಕಲೇಶಪುರದಲ್ಲಿ ಘಟ್ಟ ಪ್ರದೇಶದಲ್ಲಿ ಭೂ ಕುಸಿತವಾಗಿದ್ದು, ರೈಲ್ವೆ ಹಳಿ ಮಣ್ಣಿನ ರಾಶಿ ಬಿದ್ದ ಪರಿಣಾಮ ಮಂಗಳೂರು-ಹಾಸನ ರೈಲು ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಕಾಡಿನ ಮಧ್ಯೆ ಪರದಾಡುವಂತಾಗಿದೆ. ಮಂಗಳವಾರ ಬೆಳಗ್ಗೆ 11 ಗಂಟೆಗೆ ಮಂಗಳೂರಿನಿಂದ ಹಾಸನಕ್ಕೆ ರೈಲು ಹೊರಟಿತ್ತು.
ಇನ್ನು ಭೂ ಕುಸಿತದಿಂದ ಉಂಟಾದ ಮಣ್ಣು ತೆರವು ಕಾರ್ಯಾಚರಣೆಗಾಗಿ ಸಕಲೇಶಪುರದಿಂದ ತಂಡ ಹೊರಟು, ತೆರವು ಕಾರ್ಯಾಚರಣೆಯಲ್ಲಿ ತೊಡಗಿದೆ.ಆದರೆ ಕಾಡಿನ ಮಧ್ಯೆ ರೈಲು ನಿಲುಗಡೆಯಾಗಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಜೂನ್ ತಿಂಗಳಲ್ಲೂ ವಿಪರೀತ ಮಳೆಯಿಂದಾಗಿ ಗುಡ್ಡ ಕುಸಿದ ಕಾರಣ ರೈಲು ಸಂಚಾರ ಸ್ಥಗಿತಗೊಂಡಿತ್ತು.