ಮಂಗಳೂರು, ಜ.21 (DaijiworldNews/MB) : ಎಂಟನೇ ತರಗತಿಯ ವಿದ್ಯಾರ್ಥಿನಿಯನ್ನು ತನ್ನ ಪ್ರೀತಿಯ ನಕಲಿ ನಾಟಕಕ್ಕೆ ಬಲಿಯಾಗಿಸುವಲ್ಲಿ ಯಶಸ್ವಿಯಾದ ಯುವಕ ಆಗಾಗ್ಗೆ ತನ್ನಬೈಕ್ನಲ್ಲಿ ಬಾಲಕಿಯನ್ನು ಕರೆದೊಯ್ಯುವುದನ್ನು ಗಮನಿಸಿದ ಪೋಷಕರು ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಯುವಕನನ್ನು ಉಳ್ಳಾಲ ಪೊಲೀಸ್ ಠಾಣೆಗೆ ಕರೆತಂದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಎಂಟನೇ ತರಗತಿಯ ಬಾಲಕಿ ಮತ್ತು 25 ವರ್ಷದ ಯುವಕ ಕೆಲವು ದಿನಗಳ ಹಿಂದಿನಿಂದ ಪರಸ್ಪರ ಪ್ರೀತಿಸುತ್ತಿದ್ದು ಇಬ್ಬರು ಬೈಕ್ನಲ್ಲಿ ಸುತ್ತಾಡುತ್ತಿದ್ದರು. ಈ ಬಗ್ಗೆ ಕುಟುಂಬಸ್ಥರ ಗಮನಕ್ಕೆ ಬಂದಿದ್ದು ಅವರು ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಮಾಹಿತಿ ನೀಡಿದರು.
ಯುವಕನು ನಿರುದ್ಯೋಗಿಯಾಗಿದ್ದು ಕೆಲವು ಕೆಟ್ಟ ಅಭ್ಯಾಸವನ್ನು ಹೊಂದಿದ್ದಾನೆ ಎಂದು ವರದಿಯಾಗಿದೆ. ಬರೀ ಟೈಮ್ ಪಾಸ್ಗಾಗಿ ಆತ ಬೈಕ್ನಲ್ಲಿ ಸುತ್ತಾಡುತಲಿರುತ್ತಾನೆ ಎಂಬ ಆರೋಪಗಳು ಕೂಡಾ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಸಂಘಟಕರು ಅಪ್ರಾಪ್ತ ಬಾಲಕಿ ಹಾಗೂ ಈ ಯುವಕ ಜೊತೆಯಲ್ಲಿ ಇರುವಾಗ ಇಬ್ಬರನ್ನೂ ಕರೆತಂದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರು ಯುವಕನಿಗೆ ಪೊಲೀಸರು ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದರು.