ಉಡುಪಿ, ಜ.21 (DaijiworldNews/PY): ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿಯನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಎಸ್ಡಿಪಿಐಯ ಉಡುಪಿ ಘಟಕದ ಸದಸ್ಯರು ಜ.20ರ ಬುಧವಾರದಂದು ಉಡುಪಿಯ ಹುತಾತ್ಮರ ಸ್ಮಾರಕ ಮೈದಾನ ಅಜ್ಜರಕಾಡಿನಲ್ಲಿ ಪ್ರತಿಭಟನೆ ನಡೆಸಿದರು.






ಈ ಸಂದರ್ಭ ಮಾತನಾಡಿದ ಎಸ್ಡಿಪಿಐ ಕಾರ್ಯದರ್ಶಿ ಮಜೀದ್ ಉಚ್ಚಿಲ, "ಅವರು ಆಂತರಿಕಾ ಭದ್ರತಾ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆ. ಮುಸ್ಲಿಂ ಸಮುದಾಯವನ್ನು ತಬ್ಲಿಘಿ ಸಂಸ್ಥೆಗಳೊಂದಿಗೆ ಸಂಯೋಜಿಸಿದ್ದಾರೆ. ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಮೌನವಹಿಸಿದ್ದಾರೆ" ಎಂದು ಹೇಳಿದ್ದಾರೆ.
"ಅರ್ನಬ್ ಅಧಿಕೃತ ರಹಸ್ಯ ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರ ಅವರನ್ನು ಬಾರ್ಗಳ ಹಿಂದೆ ಕಳುಹಿಸಬೇಕು. ಈ ಬಗ್ಗೆ ತನಿಖೆ ನಡೆಸಬೇಕು" ಎಂದಿದ್ದಾರೆ.
ಎಸ್ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ಇಲ್ಯಾಸ್ ಸಸ್ತಾನ್ ಮಾತನಾಡಿ, "ಗಡಿಯಲ್ಲಿ ಸೈನಿಕರು ನಮ್ಮ ದೇಶವನ್ನು ರಕ್ಷಣೆ ಮಾಡುತ್ತಿದ್ದಾರೆ. ಈಗ ಬಾಹ್ಯ ದಾಳಿಯ ಭಯವಿಲ್ಲ. ಆದರೆ, ನಮ್ಮ ಆಂತರಿಕ ಭದ್ರತೆಗೆ ಅಪಾಯವಿದೆ. ಅಂತಹ ಸೂಕ್ಷ್ಮ ವಿಚಾರ ಅವರಿಗೆ ಹೇಗೆ ದೊರಕಿತು?" ಎಂದು ಕೇಳಿದ್ದಾರೆ.
"ತಕ್ಷಣವೇ ಅರ್ನಬ್ನನ್ನು ಬಂಧಿಸಬೇಕು. ಅವರು ಬಿಜೆಪಿ ಸರ್ಕಾರಕ್ಕಾಗೆ ಕೆಲಸ ಮಾಡುತ್ತಿದ್ದಾರೆ. ಹಾಗೂ ಇದು ರಾಷ್ಟ್ರಕ್ಕೆ ಅಪಾಯಕಾರಿ. ಬೇರೆ ಏನಾದರೂ ನಡೆಯುವ ಮುನ್ನ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು" ಎಂದು ಹೇಳಿದ್ದಾರೆ.
ಎಸ್ಡಿಪಿಐ ವಲಯ ಸಮಿತಿಯ ಸದಸ್ಯ ರಫೀಕ್ ಪೋಲಿಪು, ಸಂಶುದ್ದೀನ್ ವಹಾಬ್ ಪಡುಬಿದ್ರಿ, ಮೊಹಮ್ಮದ್ ಅಶ್ರಫ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.