ಕಾರ್ಕಳ, ಜ.21 (DaijiworldNews/MB) : ಬಿಟ್ರಿಷ್ ಕಾಲಘಟ್ಟದಲ್ಲಿ ನಿರ್ಮಾಣವಾಗಿರುವ ಕಾರ್ಕಳ ಪ್ರವಾಸಿ ಬಂಗಲೆಯಲ್ಲಿ ಕುಂದಾಪುರ ಸಹಾಯಕ ಅಯುಕ್ತರ ನೇತೃತ್ವದಲ್ಲಿ ಭೂ ಸಂಬಂಧಿಸಿ ನ್ಯಾಯಾಲಯದ ಕಲಾಪ ನಡೆಯುತ್ತಿದ್ದಾಗ ಪಕ್ಕದ ಕೋಣಿಯಲ್ಲಿ ವಿದ್ಯುತ್ ಅಘಾತಕ್ಕೀಡಾದ ಘಟನೆ ಸಂಭವಿಸಿದೆ.


ಬುಧವಾರ ಮಧ್ಯಾಹ್ನ ಸುಮಾರು 3.15ರ ವೇಳೆಗೆ ಪ್ರವಾಸಿ ಬಂಗಲೆಯಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ಕಕ್ಷಿದಾರರು, ನ್ಯಾಯವಾದಿಗಳು,ಕಂದಾಯ ಇಲಾಖಾ ಸಿಬ್ಬಂದಿಗಳು ರೆಗ್ಯೂಲೆಟರ್ನಲ್ಲಿ ಬೆಂಕಿ ನಂದಿಸಿದ್ದರು.
ಕರ್ನಾಟಕ ಲೋಕೋಪಯೋಗ ಇಲಾಖೆ ಕಾರ್ಕಳ ವಿಭಾಗದ ಅಧೀನದಲ್ಲಿ ಇರುವ ಪ್ರವಾಸಿ ಬಂಗಲೆಯು ನಿರ್ವಹಣೆ ಉತ್ತಮ ಸ್ಥಿತಿಯಲ್ಲಿದ್ದರೂ ವಿದ್ಯುತ್ ಪರಿಕರಗಳು ತೀರಾ ಹಳೆಯದಾಗಿದೆ. ಇದೇ ಪ್ರವಾಸಿ ಬಂಗಲೆಯಲ್ಲಿ ಸರಕಾರದ ಉನ್ನತ ಮಟ್ಟದ ಅಧಿಕಾರಿಗಳು ವಾಸ್ತವ್ಯ ಹೂಡುತ್ತಿದ್ದು, ರಾತ್ರಿ ವೇಳೆಯಲ್ಲಿ ಈ ಘಟನೆ ಸಂಭವಿಸುತ್ತಿದ್ದರೆ ಭಾರೀ ಅನಾಹುತವಾಗುತ್ತಿತ್ತು.
ಲೋಕೋಪಯೋಗಿ ಇಲಾಖೆಯಲ್ಲಿ ವಿದ್ಯುತ್ ಉಪವಿಭಾಗ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತ್ವರಿತಗತಿಯಲ್ಲಿ ಕ್ರಮಕೈಗೊಂಡು ಪ್ರವಾಸಿ ಬಂಗಲೆಯಲ್ಲಿ ಇರುವ ಹಳೆಯದಾದ ವಿದ್ಯುತ್ ಪರಿಕರಗಳನ್ನು ಬದಲಾಯಿಸಬೇಕಾಗಿದೆ.