ಮಂಗಳೂರು, ಜ.21 (DaijiworldNews/PY): ಏರ್ ಇಂಡಿಯಾ ವಿಮಾನದ ಮೂಲಕ ದುಬೈಯಿಂದ ಬಂದಿಳಿದ ಓರ್ವ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು, ಸುಮಾರು 44.2 ಲಕ್ಷ ಮೌಲ್ಯದ 0.8 ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಎಂದು ಕಸ್ಟಮ್ಸ್ ಅಧಿಕಾರಿ ತಿಳಿಸಿದ್ದಾರೆ.


ಬಂಧಿತನನ್ನು ಮಡಿಕೇರಿ ಮೂಲದ ಉಬೈದ್ ಬಲಿಯಾತ್ ಅಜೀಜ್ ಎಂದು ಗುರುತಿಸಲಾಗಿದೆ.
ಗುರುವಾರದಂದು ಈತ ಏರ್ ಇಂಡಿಯಾ ಮೂಲಕ ದುಬೈಗೆ ಆಗಮಿಸಿದ್ದಾನೆ. ನಿಲ್ದಾಣದಲ್ಲಿ ತಪಾಸಣೆ ನಡೆಸುತ್ತಿದ್ದ ಸಂದರ್ಭ ಈತ ಗುದನಾಳದಲ್ಲಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಬಚ್ಚಿಟ್ಟಿದ್ದು ಕಂಡುಬಂದಿದ್ದು, ಸುಮಾರು 44.2 ಲಕ್ಷ ಮೌಲ್ಯದ 0.8 ಕೆ.ಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕಸ್ಟಮ್ಸ್ ಕಮೀಷನರ್ ಅಧಿಕಾರಿ, ಇಮಾಮುದ್ದೀನ್ ಅಹ್ಮದ್, ಐಆರ್ಎಸ್ ಮಂಗಳೂರು ಏರ್ ಕಸ್ಟಮ್ಸ್ ತಂಡದ ಅಧಿಕಾರಿಗಳನ್ನು ಶ್ಲಾಘಿಸಿದ್ದಾರೆ.