ಕಾರ್ಕಳ,ಜ.22 (DaijiworldNews/HR): ಕಾಲೇಜಿಗೆ ಬಿಡುತ್ತೇನೆಂದು ನಂಬಿಸಿ ವಿದ್ಯಾರ್ಥಿನಿಯೊಬ್ಬಳನ್ನು ಕಾರಿನಲ್ಲಿ ಕುಳಿರಿಸಿ ಅಮಲು ಭರಿತ ಜ್ಯೂಸ್ ಕುಡಿಸಿ ನೇರವಾಗಿ ಉಪ್ಪಿನಂಗಡಿ ಬಂದಾರು ಮನೆಯೊಂದರಲ್ಲಿ ಕೂಡಿ ಹಾಕಿ ಅತ್ಯಾಚಾರಗೈದು ಬ್ಲಾಕ್ಮೇಲ್ ಮಾಡಿ ಆಕೆಯ ಜೀವದೊಂದಿಗೆ ನಿರಂತರವಾಗಿ ಚೆಲ್ಲಾಟ ನಡೆಸುತ್ತಿದ್ದ ಆರೋಪಿ ಉಪ್ಪಿನಂಗಡಿಯ ಪ್ರಾಣೇಶ್(38) ಎಂಬಾತನನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.

ಉಪ್ಪಿನಂಗಡಿ ಬಂದಾರಿನ ಮನೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ವೆಸಗಿದ ಆರೋಪಿ ಪ್ರಾಣೇಶ್ ಆಕೆಗೆ ಬೆದರಿಕೆಯೊಡ್ಡಿ ನಿನ್ನ ನಗ್ನ ಚಿತ್ರಗಳು ಸೆರೆ ಹಿಡಿದಿದ್ದೇನೆ. ಯಾರಿಗಾದರೂ ವಿಚಾರ ತಿಳಿಸಿದರೆ ಅದನ್ನು ಬಿಡುಗಡೆ ಮಾಡುವುದಾಗಿ ಬ್ಲಾಕ್ಮೇಲ್ ಮಾಡಿದ್ದಾನೆ.
ಮಾನಕ್ಕೆ ಅಂಜಿದ ಯುವತಿ ಆತನ ಕೃತ್ಯವನ್ನು ಇತರರಿಗೆ ತಿಳಿಸದೇ ಮೌನಕ್ಕೆ ಶರಣಾಗಿದ್ದಳು. ಅದನ್ನೇ ಬಂಡವಾಳವನ್ನಾಗಿ ಮಾಡಿದ ಆರೋಪಿ ಪ್ರಾಣೇಶ್ ವಿದ್ಯಾರ್ಥಿನಿಗೆ ಅಗ್ಗಿಂದಾಗೆ ಕರೆ ಮಾಡಿ ಕರೆದಲ್ಲಿಗೆ ಬಾರದೇ ಹೋದಲ್ಲಿ ವಿಡಿಯೋ ಪ್ರಸಾರ ಮಾಡುವುದಾಗಿ ಬೆದರಿಕೆಯೊಡ್ಡುತ್ತಿದ್ದನು ಎನ್ನಲಾಗಿದೆ.