ಮಂಗಳೂರು,ಜ.22 (DaijiworldNews/HR): ಖಾಸಗಿ ಕಾಲೇಜಿನಲ್ಲಿ ನಡೆದ ರ್ಯಾಗಿಂಗ್ ಘಟನೆಗೆ ಸಂಬಂಧಿಸಿದಂತೆ ಒಂಬತ್ತು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.




ಬಂಧಿತ ವಿದ್ಯಾರ್ಥಿಗಳನ್ನು ಜಿಷ್ಣು(20), ಶ್ರೀಕಾಂತ್ ಪಿ.ವಿ(20), ಅಶ್ವಂತ್ (20), ಸಾಯಂತ್ (22), ಅಭಿರತ್ ರಾಜೀವ್(21), ರಾಹುಲ್ ಪಿ (21), ಜಿಷ್ಣು (20), ಮುಖ್ತರ್ ಅಲಿ (19) ಮತ್ತು ಮೊಹಮ್ಮದ್ ಮೊಹಮ್ಮದ್ ರಜೀಮ್ ಕೆ (20) ಎಂದು ಗುರುತಿಸಲಾಗಿದೆ.
ಕಾಸರಗೋಡು ಮೂಲದ ಪ್ರಥಮ ವರ್ಷದ ವಿದ್ಯಾರ್ಥಿ ಜನವರಿ 10 ರಂದು ಕಾಲೇಜು ಮುಗಿಸಿ ಹಾಸ್ಟೆಲ್ ಕಡೆ ತೆರಳುತ್ತಿದ್ದಾಗ ವಿದ್ಯಾರ್ಥಿಯನ್ನು ಅಡ್ಡಗಟ್ಟಿದ ಹಿರಿಯ ವಿದ್ಯಾರ್ಥಿಗಳು ತಲೆ ಕೂದಲು, ಮೀಸೆ ತೆಗೆದು ಬರುವಂತೆ ಬೆದರಿಕೆಯೊಡಿದ್ದರು. ಆದರೆ ಆತ ತಲೆ ಕೂದಲು, ಮೀಸೆ ತೆಗೆಯದೇ ಇದ್ದುದರಿಂದ ಜ. 12ರಂದು ಮತ್ತೆ ಅಡ್ಡಗಟ್ಟಿ ರ್ಯಾಗಿಂಗ್ ನಡೆಸಿ ಹಲ್ಲೆ ನಡೆಸಿದ್ದಾರೆ.
ಇದರಿಂದ ಬೆಸತ್ತ ವಿದ್ಯಾರ್ಥಿ ಮರಳಿ ತನ್ನ ಊರಿಗೆ ಹೋಗಿದ್ದು ಮತ್ತೆ ಕಾಲೇಜಿಗೆ ಹೋಗುವುದಕ್ಕೆ ಹಿಂಜರಿದಿದ್ದ, ಬಳಿಕ ವಿದ್ಯಾರ್ಥಿಯ ಪೋಷಕರಿಗೆ ಅನುಮಾನ ಬಂದು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆಯ ವೇಳೆ ಕಾಲೇಜಿನಲ್ಲಿ ರ್ಯಾಗಿಂಗ್ ವಿಷಯ ಬೆಳಕಿಗೆ ಬಂದಿದ್ದು, ಇದರಲ್ಲಿ ಒಂಬತ್ತು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
"ರ್ಯಾಗಿಂಗ್ನಿಂದಾಗಿ ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಾವು ನೋಡಿದ್ದೇವೆ. ಈ ಸಮಸ್ಯೆಯನ್ನು ನೋಡಿಕೊಳ್ಳುವುದು ಕಾಲೇಜು ಆಡಳಿತದ ಜವಾಬ್ದಾರಿಯಾಗಿದೆ. ಕಾಲೇಜಿನ ಹೊರಗಿರುವ ಅತಿಥಿ ವಸತಿ ಸೌಕರ್ಯಗಳಲ್ಲಿ ಕೂಡ ರ್ಯಾಗಿಂಗ್ ನಡೆಯುತ್ತಿದ್ದು, ಇದರ ವಿರುದ್ಧವು ಕಾಲೇಜು. ಯಾವುದೇ ಕಾಲೇಜಿನಲ್ಲಿ ರ್ಯಾಗಿಂಗ್ ನಡೆಯಬಾರದು ಮತ್ತು ಅವರ ಪುರ್ಣಜವಾಬ್ದಾರಿಗಳನ್ನು ಕಾಲೇಜು ನೋಡಿಕೊಳ್ಳಬೇಕು" ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದ್ದಾರೆ.