ಕಾರ್ಕಳ, ಜ.22 (DaijiworldNews/HR): ಸಂತರ ದರ್ಶನಕ್ಕಾಗಿ ಅತ್ತೂರು ಪುಣ್ಯಕ್ಷೇತ್ರ, ಇಲ್ಲಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರೆ ಜೀವನ ಪಾವನವಾಗುತ್ತದೆ. ಶಾಂತಿ-ನೆಮ್ಮದಿ ದೊರೆಯುತ್ತಿದೆ ಹೀಗೆಂಬ ಮಾತುಗಳು ಕೇಳಿಬಂದಿರುವುದು ಅತ್ತೂರು ಸಂತಲಾರೆನ್ಸ್ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ ಭಕ್ತಾದಿಗಳಿಂದ.

ಅತ್ತೂರು ಪುಣ್ಯಕ್ಷೇತ್ರದಲ್ಲಿ ಜರುಗುತ್ತಿರುವ ವಾರ್ಷಿಕೋತ್ಸವದ ಐದನೇ ದಿನವಾದ ಶುಕ್ರವಾರದಂದು ಅಲ್ಲಿ ಭೇಟಿ ನೀಡಿದ ಭಕ್ತಾದಿಗಳ ಸಂಖ್ಯೆ ವೃದ್ಧಿಸಿತು. ಸಂತ ಲಾರೆನ್ಸ್ರ ನವೇನಾ ಪ್ರಾರ್ಥನೆ ಹಾಗೂ ರೋಗಿಗಳಿಗಾಗಿ ವಿಶೇಷ ಪಾರ್ಥನೆ ನೆರವೇರಿದವು.
ಪುಣ್ಯಕ್ಷೇತ್ರದಲ್ಲಿ ಮೂಡುಬೆಳ್ಳೆಯ ಫಾ. ಚಾಲ್ಸ್ ಪುರ್ಟಾಡೋ, ಗಂಟಾಲ್ಕಟ್ಟೆಯ ಫಾ. ರೋನಾಲ್ಡ್ ಪ್ರಕಾಶ್ ಡಿಸೋಜಾ, ಅಳದಂಗಡಿಯ ಫಾ. ನವೀನ್ ಪಿಂಟೋ, ಸಂದೇಶ ಪ್ರತಿಷ್ಠಾನದ ನಿರ್ದೇಶಕ ಪಾ. ಆಸಿಸಿ ಅಲ್ಮೇಡಾ , ಪಲಿಮಾರಿನ ಫಾ. ರೊಕ್ ಡಿಸೋಜಾ ಅವರು ಬಲಿಪೂಜೆಗಳನ್ನು ನೆರವೇರಿಸಿದರು.