ಕಾಸರಗೋಡು, ಜ.23 (DaijiworldNews/HR): ಕಾಸರಗೋಡು ಹೊರವಲಯದ ಖಾಸಗಿ ಶಾಲಾ ಕಾವಲುಗಾರರೋರ್ವರು ರಬ್ಬರ್ ತೋಟದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೋವಿಕ್ಕಾನದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಬೋವಿಕ್ಕಾನ ಬೇಪ ಈಚಪ್ಪಾರದ ಗೋಪಿನಾಥ (58) ಎಂದು ಗುರುತಿಸಲಾಗಿದೆ.
ಜನವರಿ 21 ರಂದು ಕೆಲಸಕ್ಕೆ ತೆರಳಿದ್ದ ಗೋಪಿನಾಥ ಶುಕ್ರವಾರ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಈ ನಡುವೆ ಇಂದು ಬೆಳಿಗ್ಗೆ 400 ಮೀಟರ್ ನಷ್ಟು ದೂರದಲ್ಲಿರುವ ಇಂದು ಬೆಳಿಗ್ಗೆ ಮನೆಯ ಸಮೀಪದ ರಬ್ಬರ್ ತೋಟಕ್ಕೆ ಬಂದ ಕಾರ್ಮಿಕರು ಮೃತದೇಹ ವನ್ನು ಗಮನಿಸಿದ್ದು, ಬಳಿಕ ಆದೂರು ಪೊಲೀಸರಿಗೆ ಮಾಹಿತಿ ನೀಡಿದರು .
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಆದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.