ಉಡುಪಿ, ಜು 05: ಸನ್ಯಾಸ ಧರ್ಮ ಪಾಲನೆ ಮಾಡದಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡವರು ಪಟ್ಟದ ದೇವರಿಗೆ ಪೂಜೆ ಮಾಡುವುದಾದಾರೂ ಹೇಗೆ ಸಾಧ್ಯ ಎಂದು ಪೇಜಾವರ ಶ್ರೀ ಪ್ರಶ್ನಿಸಿದ್ದಾರೆ. ಶಿರೂರು ಶ್ರೀಗಳ ಅನಾರೋಗ್ಯ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿ ಹಿಂತೆಗೆತ ಹಾಗೂ ತನ್ನ ವೈಯಕ್ತಿಕ ಬದುಕಿನ ಜತೆ ಅಷ್ಟಮಠಾಧೀಶರ ವಿರುದ್ದ ಮಾಡಿದ ಆರೋಪಗಳ ಹಿನ್ನಲೆಯಲ್ಲಿ ಸಪ್ತ ಮಠಾಧೀಶರು ಕ್ರಮಕ್ಕೆ ಮುಂದಾಗಿದ್ದು, ಶಿರೂರು ಮಠಕ್ಕೆ ದ್ವಂಧ ಮಠವಾದ ಸೋದೆ ಮಠದವರು ಶಿಷ್ಯರನ್ನು ನೇಮಿಸಬೇಕೆಂಬುವುದು ನಮ್ಮ ಎಲ್ಲಾ ಮಠಾಧೀಶರ ನಿಲುವು ಆಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀ ಪಾದರು ಹೇಳಿದ್ದಾರೆ.
ಯತಿ ಧರ್ಮದಲ್ಲಿದ್ದವರಿಗೆ ಮಾತ್ರ ಪೂಜೆಯ ಹಕ್ಕು ಇರುತ್ತದೆ ಮತ್ತು ಪುತ್ತಿಗೆ ಮತ್ತು ಶೀರೂರು ಮಠಾಧೀಶರ ವಿಷಯದಲ್ಲಿ ಬಹಳ ವ್ಯತ್ಯಾಸವಿದೆ. ಪುತ್ತಿಗೆ ಶ್ರೀಗಳದ್ದು ಕೇವಲ ವಿದೇಶ ಪ್ರಯಾಣ ಮಾತ್ರ ವಿಷಯ ಅವರು ಯತಿ ಧರ್ಮ ಪಾಲನೆಯಲ್ಲಿದ್ದಾರೆ. ಶೀರೂರು ಸ್ವಾಮೀಜಿಗಳು ತಾವೇ ಖುದ್ದು ಯತಿ ಧರ್ಮದಲ್ಲಿಲ್ಲ ಎಂದು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ..ಅದ್ದರಿಂದ ಏಳು ಮಠಾಧೀಶರು ಸಭೆ ಸೇರಿ ಶೀರೂರು ಶ್ರೀ ನಿವೃತ್ತಿ ಪಡೆದುಕೊಳ್ಳುವುದೇ ಸೂಕ್ತ ಎಂದು ನಿರ್ಧರಿಸಿದ್ದಾರೆ. ಇನ್ನು ಪಟ್ಟದ ದೇವರಿಗೆ ಶೀರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀ ಪಾದರಿಗೆ ಶ್ರೀ ಕೃಷ್ಣ ಮಠದ ಪಟ್ಟದ ದೇವರು ನೀಡದ ವಿಚಾರ ಜು. 23 ರ ಚಾತುರ್ಮಾಸ್ಯದೊಳಗೆ ಇತ್ಯರ್ಥವಾಗಲಿದೆ ಎಂದರು.