ಉಳ್ಳಾಲ,ಜ.24 (DaijiworldNews/HR): ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿ ತಲೆಮರೆಸಿಕೊಂಡಿದ್ದ ಎಸ್ಡಿಪಿಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಸಿದ್ದೀಖ್ ಉಳ್ಳಾಲ್ (43) ಎಂಬಾತನನ್ನು ಉಳ್ಳಾಲ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ವಿವಾಹಿತೆ ಮಹಿಳೆಯ ಪತಿ ತೊರೆದಿದ್ದು, ಆಕೆಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸಹಾಯದ ನೆಪದಲ್ಲಿ ಮಹಿಳೆ ಮನೆಗೆ ಭೇಟಿ ನೀಡುತ್ತಿದ್ದ ಸಿದ್ದೀಖ್ 15ರ ಹರೆಯದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ.
ಈ ಬಗ್ಗೆ ಮಹಿಳೆ ಜ.19 ರಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರು ದಾಖಲಿಸುವ ಸಂದರ್ಭ ಮಹಿಳೆಗೆ ಎಸ್ಡಿಪಿಐ ಉಳ್ಳಾಲದ ಮುಖಂಡರು ಬೆದರಿಕೆಯನ್ನು ಹಾಕಿದ ಪ್ರಕರಣವೂ ಉಳ್ಳಾಲ ಠಾಣೆಯಲ್ಲಿದೆ. ಅದರಂತೆ ಪೋಕ್ಸೊ ಕಾಯಿದೆಯಡಿ ಮತ್ತು ಬೆದರಿಕೆಯೊಡ್ಡಿದ ಕುರಿತು ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಸಿದ್ದೀಖ್ ತಲೆಮರೆಸಿಕೊಂಡಿದ್ದು, ಶನಿವಾರ ಆತನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.