ಮಂಗಳೂರು, ಜ.24 (DaijiworldNews/HR): ಕಾರ್ಸ್ಟ್ರೀಟ್ನಲ್ಲಿರುವ ವೆಂಕಟರಮಣ ದೇವಾಸ್ಥಾನದ ಎದುರಿನ ಬೃಹತ್ ಗಾತ್ರದ ಆಲದ ಮರವೊಂದು ತುಂಡಾಗಿ ಬಿದ್ದ ಘಟನೆ ಭಾನುವಾರ ಬೆಳಿಗ್ಗೆ 8.10 ರ ಸುಮಾರಿಗೆ ನಡೆದಿದೆ.











ಈ ಸಮಯದಲ್ಲಿ ಹೆಚ್ಚಿನ ಜನರು ಇಲ್ಲದ ಕಾರಣ ಯಾವುದೇ ಸಾವುನೋವುಗಳು ಸಂಭವಿಸಿಲ್ಲ.
ಘಟನೆಯಲ್ಲಿ ಕ್ರೇನ್, ನೀರಿನ ಟ್ಯಾಂಕರ್ ಮತ್ತು ಒಂದು ಕಾರು ಜಖಂಗೊಂಡಿರುವುದಾಗಿ ತಿಳಿದುಬಂದಿದೆ.
ಇನ್ನು ಈ ಮರವು 80 ವರ್ಷಕ್ಕಿಂತ ಹಳೆಯದಾಗಿದೆ ಎಂದು ಮೂಲಗಳು ತಿಳಿಸಿವೆ.
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.