ಮಂಗಳೂರು, ಜ.24 (DaijiworldNews/MB) : ನಗರ ಪೊಲೀಸರು ಶನಿವಾರ ಜನವರಿ 23 ರಂದು ಅತ್ತಾವರದಲ್ಲಿರುವ ಲಾಡ್ಜ್ ಮೇಲೆ ದಾಳಿ ನಡೆಸಿ ಇಬ್ಬರು ಪುರುಷರನ್ನು ಬಂಧಿಸಿ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.

ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸ್ ತಂಡ ಅತ್ತಾವರದಲ್ಲಿರುವ ಆಮಂತ್ರಣಾ ಲಾಡ್ಜ್ ಮೇಲೆ ದಾಳಿ ನಡೆಸಿದ್ದು, ಅಲ್ಲಿ 211 ಮತ್ತು 212 ಸಂಖ್ಯೆಯ ಕೊಠಡಿಗಳಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಕಂಡುಬಂದಿದೆ.
ಇಬ್ಬರು ಗ್ರಾಹಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅವರ ಹೇಳಿಕೆಗಳ ಆಧಾರದ ಮೇಲೆ ಲಾಡ್ಜ್ನ ವ್ಯವಸ್ಥಾಪಕ ಚಂದ್ರಶೇಖರ್ ಮತ್ತು ರೂಮ್ ಬಾಯ್ ಹರೀಶ್ ಪೂಜಾರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ.
ಚಂದ್ರಶೇಖರ್, ಹರೀಶ್ ಪೂಜಾರಿ ಮತ್ತು ಸಂದೀಪ್ ಎಂಬವರು ಲಾಡ್ಜ್ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಮಾಹಿತಿಯ ಆಧಾರದ ಮೇಲೆ ಜನವರಿ 22 ರಂದು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಐಟಿಪಿ ಕಾನೂನಿನಡಿಯಲ್ಲಿ ಸುಯೋ ಮೋಟು ಪ್ರಕರಣ ದಾಖಲಾಗಿತ್ತು.
ಹೆಡ್ ಕಾನ್ಸ್ಟೆಬಲ್ಗಳಾದ ಮಣಿ ಮತ್ತು ಜಾಕೋಬ್, ಕಾನ್ಸ್ಟೆಬಲ್ಗಳಾದ ಧನಲಕ್ಷ್ಮಿ ಮತ್ತು ಸಫ್ರೀನಾ ಈ ದಾಳಿಯ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.