ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಅನ್ನು ಹಣಕಾಸು ಸಚಿವರಾದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಂಡಿಸುತ್ತಿದ್ದಾರೆ. ಜು. ೫ ರ ಗುರುವಾರ ಬೆಳಿಗ್ಗೆ 11 ಗಂಟೆಗೆ ಸಂಪುಟ ಸಭೆ ನಡೆದ ಬಳಿಕ 11:30 ರಿಂದ ಬಜೆಟ್ ಮಂಡನೆಗೆ ತೊಡಗಿದ್ದಾರೆ .2,18,488 ಲಕ್ಷ ಕೋಟಿ ರೂ. ಗಾತ್ರದ ದೋಸ್ತಿ ಸರ್ಕಾರದ ಮೊದಲ ಬಜೆಟ್ ಇದಾಗಿದ್ದು, ಇಲ್ಲಿ ಪ್ರಮುಖ ಅಂಶಗಳನ್ನು ನೀಡಲಾಗಿದೆ.
*ಪ್ರತಿ ರೈತ ಕುಟುಂಬದ 2 ಲಕ್ಷದವರೆಗಿನ ಸಾಲಮನ್ನಾ. ರೈತರ ಸಂಪೂರ್ಣ ಸಾಲಮನ್ನಾ ಇಲ್ಲ. ಸಾಲ ಮರುಪಾವತಿಸಿದ ರೈತರ ಖಾತೆಗೆ ರೂ 25000 . ರೈತರ ಸಾಲಮನ್ನಾಕ್ಕಾಗಿಯೇ 34 ಸಾವಿರ ಕೋಟಿ ರೂ.ಮೀಸಲು
*ಅತ್ಯುತ್ತಮ ಗುಣಮಟ್ಟದ ಬೀಜ ದೃಢೀಕರಣ ಕೇಂದ್ರ ಸ್ಥಾಪನೆಗೆ ಸರ್ಕಾರ ನಿರ್ಧಾರ
*ಇಸ್ರೇಲ್ ಮಾದರಿ ನೀರಾವರಿ ವ್ಯವಸ್ಥೆಗೆ ರೂ. 150 ಕೋಟಿ ರೂ.
*'ಕಾಯಕ' ಯೋಜನೆಯಡಿ 5 ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ.
*ಅನ್ನಭಾಗ್ಯ ಯೋಜನೆಯ ಅಕ್ಕಿಗೆ ಕತ್ತರಿ 7 ಕೆ.ಜಿ ಯಿಂದ 5 ಕೆ,ಜಿ ಇಳಿಕೆ ,1ಕೆ.ಜಿ ಅಯೋಡಿನ್ ಉಪ್ಪು, ಒಂದು ಕೆ.ಜಿ ಸಕ್ಕರೆ, ರಿಯಾಯಿತಿ ದರದಲ್ಲಿ 500 ಗ್ರಾಂ ತೊಗರಿಬೇಳೆ, ಬಿಪಿಎಲ್ ಪಡಿತರ ಚೀಟಿದಾರರಿಗೆ 1 ಕೆ.ಜಿ ಪಾಮ್ ಎಣ್ಣೆ
*ರಾಜ್ಯದಲ್ಲಿ ಮದ್ಯ ದುಬಾರಿ
* ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಶೇ. 30ರಿಂದ 32ಕ್ಕೆ ಏರಿಕೆ
*ವಿವಿಧ ಮಠ ಮಾನ್ಯಗಳಿಗೆ 25 ಕೋಟಿ ರು ಅನುದಾನ
*ಬೆಂಗಳೂರಿನ 6 ಕಡೆ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಅಂದಾಜು ವೆಚ್ಚ 15,285 ಕೋಟಿ ರು.
*ಶೂನ್ಯ ಬಂಡವಾಳ ಸಹಜ ಕೃಷಿ ಅಳವಡಿಕೆಗೆ ಒತ್ತು