ಮಂಗಳೂರು, ಜು 05: ದಿಲ್ಲಿಯಲ್ಲಿ ನಡೆದ ಕಾಮನ್ ವೆಲ್ತ್ ಚೆಸ್ ಚಾಂಪಿಯನನ್ ಷಿಪ್ ನಲ್ಲಿ ಮಂಗಳೂರಿನ ಬಾಲೆ ಶ್ರೀಯಾನಾ ಮಲ್ಯ ( 8 ) ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾಳೆ.
ದಿಲ್ಲಿಯ ದಿ ಲೀಲಾ ಅಂಬಿಯೆನ್ಸ್ ಕನ್ವೆನ್ಶನ್ ಹೋಟೇಲ್ ನಲ್ಲಿ ಜೂ. 25 ರಿಂದ ಜು. 3ರ ತನಕ ನಡೆದ ಕಾಮನ್ ವೆಲ್ತ್ ಚೆಸ್ ಚಾಂಪಿಯನ್ ಷಿಪ್ ನ 8 ವರ್ಷದೊಳಗಿನ ಬಾಲಕಿಯರ ವಿಭಾಗದ ಏಳು ಸುತ್ತುಗಳಲ್ಲಿ ಎರಡು ಡ್ರಾ ದೊಂದಿಗೆ ಶ್ರಿಯಾನಾ ಅಂಕಗಳನ್ನು ಗಳಿಸಿದ್ದಾಳೆ. 15 ವಿಭಾಗದಲ್ಲಿ ಸ್ವರ್ಧೆ ನಡೆದಿದ್ದು, ಪಾಕಿಸ್ತಾನ, ದಕ್ಷಿಣ ಆಫ್ರಿಕಾ , ಶ್ರೀಲಂಕಾ , ಇಂಗ್ಲೆಂಡ್ ಸಹಿತ 53 ದೇಶಗಳು ಭಾರತದ ನಾನಾ ಆಟಗಾರರ ಸಹಿತ 742 ಸ್ವರ್ಧಿಗಳು ಪಾಲ್ಗೊಂಡಿದ್ದರು.
ಶ್ರಿಯಾನಾ ಯುರೋಪ್ ಖಂಡದ ಸ್ಪೇನ್ ನಲ್ಲಿ 2018 ರ ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ವಲ್ಡ್ ಕೆಡೆಟ್ ಚೆಸ್ ಚಾಂಪಿಯನ್ ಷಿಪ್ ಗೆ ದಿಲ್ಲಿಯಲ್ಲಿ ನಡೆದ ಕಾಮನ್ ವೆಲ್ತ್ ಚೆಸ್ ಚಾಂಪಿಯನ್ ಷಿಪ್ ನಲ್ಲಿ ಸ್ವರ್ಣ ಪದಕ ಪಡೆದ ಹಿನ್ನಲೆಯಲ್ಲಿ ಅರ್ಹತೆ ಪಡೆದಿದ್ದಾರೆ. ಕಾಮನ್ ವೆಲ್ತ್ ಚೆಸ್ ಚಾಂಪಿಯನ್ ಷಿಪ್ ನಲ್ಲಿ ಗೆದ್ದವರು 2018ರಲ್ಲಿ ನಡೆಯುವ ಏಶ್ಯನ್ ಚೆಸ್ ಚಾಂಪಿಯನ್ ಷಿಪ್ ಗೂ ಅರ್ಹತೆ ಪಡೆಯಲಿದ್ದು ಇಲ್ಲಿ ಗೆದ್ದವವರು ಫಿಡೆ ವಲ್ಡ್ ಕಪ್ ಮತ್ತು ಮಹಿಳಾ ವಿಶ್ವ ಚೆಸ್ ಚಾಂಪಿಯನ್ ಷಿಪ್ ಗೆ ಅರ್ಹತೆ ಗಳಿಸಿಲಿದ್ದಾರೆ.
ಶ್ರೀಯಾನಾ ಗೆ ಮಂಗಳೂರಿನ ಗಹನ್ ಎಂ.ಜಿ ಮತ್ತು ಸಮೀರ್ ಘೊಟಾನೆ ತರಬೇತಿ ನೀಡುತ್ತಿದ್ದಾರೆ. ಮಂಗಳೂರು ಉರ್ವದ ಸಂದೀಪ್ ಮತ್ತು ನಂದಿನ್ ಮಲ್ಯ ದಂಪತಿ ಪುತ್ರಿಯಾದ ಶ್ರೀಯಾನಾ ಅಪ್ಪನಿಂದ ಚದುರಂಗ ಕಲಿತಿದ್ದು ಚೆನ್ನೈನಲ್ಲಿ ಆಗಸ್ಟ್ ಮೊದಲ ವಾರದಲ್ಲಿ ನಡೆಯುವ ರಾಷ್ಟ್ರೀಯ ಸ್ವರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾಳೆ. ಈಕೆ ಬಿಜೈನ ಲೂರ್ಡ್ಸ್ ಸೆಂಟ್ರಲ್ ಸ್ಕೂಲಿನ 3 ನೇ ತರಗತಿ ವಿದ್ಯಾರ್ಥಿನಿ.