ಉಡುಪಿ, ಜ.24 (DaijiworldNews/MB) : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಶಕ್ತಿ ಕೇಂದ್ರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಅಂಗವಾಗಿ ಜಿಲ್ಲಾ ಮಟ್ಟದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಬಾಲಕಿಯರ ಬಾಲಮಂದಿರ ನಿಟ್ಟೂರಿನಲ್ಲಿ ಜರುಗಿತು.






ಉದ್ಘಾಟನೆಯನ್ನು ಪುಟಾಣಿ ಮಕ್ಕಳೊಂದಿಗೆ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ರೊನಾಲ್ಡ್ ಫುರ್ಟಾಡೋ ಅವರು ಗಿಡಕ್ಕೆ ನೀರು ಸುರಿದು ಉದ್ಘಾಟಿಸಿ ಶುಭ ಹಾರೈಸಿದರು.
ಮಕ್ಕಳ ಬಾಯಿಗೆ ಜೇನು ತುಪ್ಪ ಹಾಕುವ ಮೂಲಕ ಮಕ್ಕಳ ಭವಿಷ್ಯ ಸಿಹಿಯಾಗಿರಲಿ ಎಂದು ಹಾರೈಸಲಾಯಿತು. ವಿಶಿಷ್ಟವಾಗಿ ಹೆಣ್ಣು ಮಕ್ಕಳ ದಿನಾಚರಣೆ ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿರುವ ಆರ್. ಶೇಷಪ್ಪ ಮಾತನಾಡಿ ಮಕ್ಕಳ ರಕ್ಷಣೆ ಪೋಷಣೆ ಹಾಗೂ ಸರ್ಕಾರದ ಯೋಜನೆ ಅನುಷ್ಠಾನಗೊಳಿಸುವ ಮೂಲಕ ಹೆಣ್ಣು ಮಕ್ಕಳನ್ನು ಮುಖ್ಯವಾಹಿನಿಗೆ ತರಲಾಗುವದೆಂದರು.
ಮುಖ್ಯ ಅಥಿತಿಯಾಗಿರುವ ಸದಾನಂದ ನಾಯಕ್ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಾತನಾಡಿ ಮಕ್ಕಳ ಆರೋಗ್ಯ,ಶಿಕ್ಷಣ, ಪೌಷ್ಟಿಕತೆ, ಬಾಲ್ಯವಿವಾಹ, ಇತ್ಯಾದಿ ಕಾಯ್ದೆ ಬಗ್ಗೆ ಅರಿವು ಮೂಡಿಸಿದರು.
ಚಂದ್ರಿಕಾ ಎಸ್ ನಾಯಕ್ ಅಭಿವೃದ್ಧಿ ನಿರೀಕ್ಷಕರು ಮಹಿಳಾ ಅಭಿವೃದ್ಧಿ ನಿಗಮ ಪ್ರಾಸ್ತಾವಿಕ ಮಾತನಾಡಿದರು. ಸುಮತಿ ಅಧೀಕ್ಷಕಿ ಬಾಲಕಿಯರ ಬಾಲಮಂದಿರ ನಿಟ್ಟೂರು, ರಾಮಚಂದ್ರ ಉಪಾಧ್ಯ ನಿರ್ದೇಶಕರು ಮಕ್ಕಳ ಸಹಾಯವಾಣಿ, ದೀಪಾ ಮಹಿಳಾ ಕಲ್ಯಾಣಾಧಿಕಾರಿ ಮಹಿಳಾ ಶಕ್ತಿ ಕೇಂದ್ರ, ಪ್ರಭಾಕರ ಆಚಾರ್ ಕಾನೂನು ಪರಿವೀಕ್ಷಣಾಧಿಕಾರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಪಸ್ಥಿತರಿದ್ದರು. ಮಹಿಳಾ ಶಕ್ತಿ ಕೇಂದ್ರದ ಸಂಯೋಜಕರಾದ ಶಾರದಾ ಸ್ವಾಗತಿಸಿ ಅನುಷಾ ವಂದಿಸಿದರು.