ಮಂಗಳೂರು, ಜ.25 (DaijiworldNews/MB) : ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಆಯುಕ್ತ ದಿನೇಶ್ ಕುಮಾರ್ ಅವರ ಮೇಲೆ ವರದಕ್ಷಿಣೆ ಕಿರುಕುಳ ಆರೋಪವಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ದಿನೇಶ್ ಕುಮಾರ್ ಅವರ ಪತ್ನಿಯು ಅವರ ವಿರುದ್ದ ಕೊಲೆ ಯತ್ನ ಮತ್ತು ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ದೂರು ದಾಖಲಿಸಿದ್ದಾರೆ.
ದಿನೇಶ್ ಕುಮಾರ್ ಮಾತ್ರ ನಗರದ ಫ್ಲ್ಯಾಟ್ನಲ್ಲಿ ಉಳಿದುಕೊಂಡಿದ್ದಾರೆ. ಅವರ ಪತ್ನಿ ದೀಪ್ತಿ ಕೆ ಪಿ (28) ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.
ಶುಕ್ರವಾರ ದಿನೇಶ್ ಕಚೇರಿಗೆ ಹಾಜರಾಗಿದ್ದರು. ಆದರೆ ರಾತ್ರಿಯಿಂದ ಮೂಡಾ ಅಧ್ಯಕ್ಷರು ಅಥವಾ ಇತರರು ಸಂಪರ್ಕಕ್ಕೆ ಅವರು ಬಂದಿಲ್ಲ. ಫ್ಲ್ಯಾಟ್ ಅನ್ನು ಲಾಕ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ದಿನೇಶ್ ಕೆಎಎಸ್ 2012 ಬ್ಯಾಚ್ ಅಧಿಕಾರಿಯಾಗಿದ್ದಾರೆ.