ಕಾಸರಗೋಡು, ಜ.25 (DaijiworldNews/HR): ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಎಂಡೋಸಲ್ಫಾನ್ ಸಂತ್ರಸ್ಥ ಹೋರಾಟ ಒಕ್ಕೂಟ ಸಮಿತಿ ನೇತೃತ್ವದಲ್ಲಿ ಸೋಮವಾರ ಕಾಸರಗೋಡು ಹೊಸ ಬಸ್ಸು ನಿಲ್ದಾಣ ಪರಿಸರದಲ್ಲಿ ಸತ್ಯಾಗ್ರಹ ನಡೆಸಿದರು.



ಸಂತ್ರಸ್ಥರಿಗೆ ಮಾನವ ಹಕ್ಕು ಆಯೋಗ ಶಿಫಾರಸು ಮಾಡಿದ ಪರಿಹಾರ ಪರಿಹಾರ ಧನ ಕೂಡಲೆ ವಿತರಿಸಬೇಕು. ಸಂತ್ರಸ್ಥ ಪಟ್ಟಿಯಲ್ಲಿ ಒಳಗೊಂಡ ಎಲ್ಲರಿಗೂ ಚಿಕಿತ್ಸೆ ಹಾಗೂ ಗುರುತು ಚೀಟಿ ನೀಡಬೇಕು ಮೊದಲಾದ ಹಲವು ಬೇಡಿಕೆಗಳನ್ನುಮ್ಮುಂದಿಟ್ಟುಕೊಂಡು ಸತ್ಯಾಗ್ರಹ ನಡೆಸಿದರು.
ಸತ್ಯಾಗ್ರಹವನ್ನು ಸಂತ್ರಸ್ಥ ವೈಶಾಖ್ ಉದ್ಘಾಟಿಸಿ, ರಾಧಾಕೃಷ್ಣ ಮಧೂರು ಅಧ್ಯಕ್ಷತೆ ವಹಿಸಿದ್ದರು.