ಮಂಗಳೂರು, ಜ.26 (DaijiworldNews/MB) : ''ಭಾರತ ದೇಶವನ್ನು ನಾಶ ಮಾಡಬೇಕಾದರೆ ಹಿಂದೂ ಧರ್ಮವನ್ನು ನಾಶ ಮಾಡಿದರೆ ಸಾಕು ಈ ನಿಟ್ಟಿನಲ್ಲಿ ದೇಶವನ್ನು ಇಸ್ಲಾಮಿಕರಣ ಮಾಡುವ ಷಡ್ಯಂತ್ರ ನಡೆಯುತ್ತಿದ್ದು ಇದರ ಒಂದು ಆಂಗವಾಗಿ ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಹಾನಿ ಮಾಡುವ ಕಾರ್ಯ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಲಬ್ ಜಿಹಾದ್, ಲ್ಯಾಂಡ್ ಜಿಹಾದ್ ಮೂಲಕ ಹಿಂದೂಗಳನ್ನು ಅತಂತ್ರಗೊಳಿಸುವ ಕಾರ್ಯ ನಡೆಯುತ್ತಿದೆ. ಇಂತಹ ಘಟನೆಗಳು ನಡೆದಾಗ ಕೇವಲ ಹಿಂದೂ ಸಂಘಟನೆಗಳು ಮಾತ್ರ ಪ್ರತಿಭಟಿಸುವುದಲ್ಲ ಇಡೀ ಹಿಂದೂ ಸಮಾಜ ಒಟ್ಟಾಗಿ ನಿಂತು ಪ್ರತಿಭಟಿಸುವ ಕಾರ್ಯ ಆಗಬೇಕು'' ಎಂದು ವಿಶ್ವ ಹಿಂದೂ ಪರಿಷತ್ನ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿದರು.




























ವಿ.ಹಿಂಪ ಬಜರಂಗದಳ ಉಳ್ಳಾಲ ಪ್ರಖಂಡ ಉಳ್ಳಾಲ ಪರಿಸರದಲ್ಲಿ ನಡೆಯುವ ಹಿಂದೂ ವಿರೋಧಿ ಕೃತ್ಯಗಳನ್ನು ಹಾಗೂ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುತ್ತಿರುವ ಹುನ್ನಾರದ ವಿರುದ್ದ ತೊಕ್ಕೊಟ್ಟು ಬಸ್ಸು ನಿಲ್ದಾಣದಲ್ಲಿ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
''ಮತಾಂಧ ಶಕ್ತಿಗಳು ಹಿಂದೂಗಳ ಮೇಲೆ ದಾಳಿ ನಡೆಸಲು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರಯೋಗ ಶಾಲೆಯನ್ನಾಗಿ ಮಾಡುವ ಹುನ್ನಾರ ನಡೆಸುತ್ತಿದ್ದಾರೆ. ಹಿಂದೂಗಳ ವಿರುದ್ಧ ನಡೆಯುವ ಹಿಂದೂ ವಿರೋಧಿ ಘಟನೆಗಳು ಆರಂಭವಾಗುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಅದನ್ನು ರಾಜ್ಯದಾದ್ಯಂತ ನಡೆಸುತ್ತಾರೆ. ಹಿಂದೂ ಮುಖಂಡರ ಹತ್ಯೆಯೂ ನಡೆದದ್ದು ಜಿಲೆಯಲ್ಲಿ ಬಳಿಕ ರಾಜ್ಯದಾದ್ಯಂತ ಹಿಂದೂ ಮುಖಂಡರ ಹತ್ಯೆ ನಡೆಯಿತು. ಇದೀಗ ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ದುಷ್ಕೃತ್ಯಗಳು ನಡೆದರೂ ನಾವು ಇನ್ನೂ ಎಚ್ಚೆತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಒಂದು ಧರ್ಮದ ದೇವರ ವಿರುದ್ಧ ಪೋಸ್ಟ್ ಹಾಕಿದಾಗ ಮನೆ, ಪೊಲೀಸ್ ಠಾಣೆ ಸೇರಿದಂತೆ ಇಡೀ ಊರನ್ನೇ ಸುಟ್ಟು ದಾಂದಲೆ ಮಾಡಿದ್ದಾರೆ ಈ ನಿಟ್ಟಿನಲ್ಲಿ ಹಿಂದೂ ಧರ್ಮದ ಬಾಂದವರು ಒಟ್ಟಾಗಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ'' ಎಂದರು.
''ಇತ್ತೀಚೆಗೆ ರಾಜಕೀಯ ಪಕ್ಷದ ಮುಖಂಡರೊಬ್ಬರ 'ನೀ ತಾಂಟ್ರೆ ನಾ ತಾಂಟ್ರೆ' ಭಾಷಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದೀಗ ಆ ವ್ಯಕ್ತಿ ಕಾಮಿಡಿ ಪೀಸ್ ಆಗುತ್ತಿದ್ದಾನೆ. ಹಿಂದೂ ಧರ್ಮ ಲಕ್ಷಾಂತರ ವರ್ಷದಿಂದ ಭಾರತದಲ್ಲಿ ಇದೆ. ಸಾವಿರಾರು ವರ್ಷಗಳ ಹಿಂದೆ ಹುಟ್ಟಿದ ಧರ್ಮದವನೊಬ್ಬ ಇಂತಹ ಹೇಳಿಕೆಗಳು ಹಾಸ್ಯಸ್ಪದವಾಗಿದ್ದು, ಹಿಂದೂ ಧರ್ಮ ಹೋರಾಟಕ್ಕೆ ಸಿದ್ಧವಾಗಿದೆ. ಈಗಾಗಲೇ ಆಯೋಧ್ಯೆ ಆಯಿತು, ಮುಂದಿನ ಸರದಿ ಕಾಶಿ ಮತ್ತು ಮಥುರವಾಗಿದ್ದು ತಾಕತ್ತಿದ್ದರೆ ನಿಲ್ಲಿಸಲು ತಾಂಟಲು ಸಿದ್ಧರಾಗಿ'' ಎಂದು ಸವಾಲೆಸೆದರು.
ಬಜರಂಗದಳದ ವಿಭಾಗ ಸಂಚಾಲಕ ಭುಜಂಗ ಕುಲಾಲ್ ಮಾತನಾಡಿ, ''ಉಳ್ಳಾಲ ಸೇರಿದಂತೆ ಜಿಲ್ಲೆಯಲ್ಲಿ ಧಾರ್ಮಿಕ ಕೇಂದ್ರಗಳ ಮೇಲೆ ಹಾನಿ ಮಾಡಿದವರನ್ನು ಹಿಡಿಯಲು ಪೊಲೀಸರು ಸಿದ್ಧರಾಗಿ ಇಲ್ಲದಿದಲ್ಲಿ ಬಜರಂಗದಳದವರು ತಲವಾರು ಹಿಡಿಯುವ ದಿನ ಬೇಗ ಬರಬಹುದು ಎಂದ ಅವರು ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಭದ್ರಕೋಟೆಯಾಗಿದ್ದು ಇಲ್ಲಿ ಹಿಂದುತ್ವದ ವಿರುದ್ದ ತೊಡೆತಟ್ಟಿ ತಾಂಟಲು ಬಂದರೆ ನಮ್ಮವರೂ ತಾಂಟಲು ಸಿದ್ಧರಿದ್ದಾರೆ. ಕೊರಗಜ್ಜ ದೈವದ ಶಕ್ತಿ ಇವರಿಗೆ ಅರಿವಿಲ್ಲ, ಶೀಘ್ರದಲ್ಲೇ ದುಷ್ಕೃತ್ಯದ ಪರಿಣಾಮ ದೈವ ತೋರಿಸಲಿದೆ'' ಎಂದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ''ಮಂಗಳೂರು ಕ್ಷೇತ್ರದ ಶಾಸಕರೇ ಬೆಂಗಳೂರಿಗೆ ಹೋಗುವುದನ್ನು ಕಡಿಮೆ ಮಾಡಿ ಉಳ್ಳಾಲದಲ್ಲಿ ಸುತ್ತು ಹಾಕಿ ಇಲ್ಲಿನ ವಿಚಾರಗಳನ್ನು ಅರಿವು ಮಾಡಿಕೊಳ್ಳಲಿ'' ಎಂದು ಹೇಳಿದರು.
''ಫರಂಗಿಪೇಟೆಯಲ್ಲಿಲ್ಲದ ರಿಯಾಝ್ ಫರಂಗಿಪೇಟೆ ಎರಡು ಸೀಟು ಹಿಡಿದುಕೊಂಡು ತಾಂಟಲು ಬರುತ್ತಿರುವುದು ಹಾಸ್ಯಾಸ್ಪದ. ತಾಕತ್ತಿದ್ದಲ್ಲಿ ಹಿಂದೂಗಳಿರುವ ಜಾಗದಲ್ಲಿ ನಿಂತು ಗೆದ್ದು ತೋರಿಸಲಿ. ಅವರ ಪಕ್ಷದ ಸಿದ್ಧಾಂತದ ಸ್ವತಂತ್ರ್ಯಕ್ಕೆ ಅರ್ಥವಿಲ್ಲ. ಅತಂತ್ರದಲ್ಲಿ ಸ್ವತಂತ್ರ್ಯವಿದ್ದು ಎದ್ದರೆ ಫರಂಗಿಪೇಟೆ ವಿಳಾಸ ಸಿಗಲು ಸಾಧ್ಯವಿಲ್ಲ. ಕೊರಗಜ್ಜನ ಸನ್ನಿಧಾನದಲ್ಲಿ ಚಕ್ಕುಳಿ ಬೀಡ ಇಟ್ಟು, ಅನ್ಯಾಯ ಮಾಡಿದವರ ವಿರುದ್ಧ ಪ್ರಾರ್ಥಿಸಿದರೆ ಅಂತಹವರ ಕುಟುಂಬದ ಸಂತಾನವೇ ನಶಿಸಿ ಹೋಗಿರುವ ಉದಾಹರಣೆಗಳಿವೆ'' ಎಂದರು.
ಭಜರಂಗದಳ ಸಂಚಾಲಕ ಗುರು ಉಳ್ಳಾಲಬೈಲು ಸ್ವಾಗತಿಸಿ ಪ್ರಸ್ತಾವನೆಗೈದರು. ಅರ್ಜುನ್ ಮಾಡೂರು ಕಾರ್ಯಕ್ರಮ ನಿರ್ವಹಿಸಿದರು. ದೀಪಕ್ ಬಿಜಗುರಿ ವಂದಿಸಿದರು.